Advertisement

ತೈಲ ಬೆಲೆ ಏರಿಕೆ  ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

05:41 PM Jun 15, 2021 | Team Udayavani |

ಮೈಸೂರು: ತೈಲ ಬೆಲೆ ಏರಿಕೆ ವಿರೋಧಿಸಿ ರಾಷ್ಟ್ರೀಯ ಯುವಕಾಂಗ್ರೆಸ್‌ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

Advertisement

ನಗರದ ಕಾಂಗ್ರೆಸ್‌ ಭವನದ ಬಳಿಯಿಂದ ಬೈಕ್‌ಗೆ ಹಗ್ಗಕಟ್ಟಿ ಎಳೆದ ಪ್ರತಿಭಟನಾಕಾರರು, ಅಂತಾರಾಷ್ಟ್ರೀಯಮಟ್ಟದಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಹಂತಹಂತವಾಗಿ ಹೆಚ್ಚಳ ಮಾಡಿದ್ದಾರೆ. ಕೂಡಲೆ ಕೇಂದ್ರ ಸರ್ಕಾರತೈಲ ಬೆಲೆ ಮತ್ತು ಅಡುಗೆ ಅನಿಲ ದರವನ್ನು ಕಡಿಮೆಮಾಡುವಂತೆ ಆಗ್ರಹಿಸಿದರು.

ಚಾಮುಂಡೇಶ್ವರಿ ಬ್ಲಾಕ್‌ ಸಮಿತಿ: ಚಾಮುಂಡೇಶ್ವರಿ ಬ್ಲಾಕ್‌ ಸಮಿತಿ ವತಿಯಿಂದ ಸಮಿತಿಯ ಅಧ್ಯಕ್ಷ ನಾಗನಹಳ್ಳಿಉಮಾ ಶಂಕರ್‌ ಅಧ್ಯಕ್ಷತೆಯಲ್ಲಿ ನಗರದ ನಿವೇದಿತಾ ನಗರದ ಪೆಟ್ರೋಲ್‌ ಬಂಕ್‌ ಬಳಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಕೆ.ಮರಿಗೌಡ,ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಜೇಸುದಾಸ್‌,ಮಾಜಿ ಮೇಯರ್‌ ಟಿ.ಬಿ.ಚಿಕ್ಕಣ್ಣ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಹಿನಕಲ್‌ ಮಂಜು, ಇಲವಾಲಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಎಸ್‌. ಸಿದ್ದರಾಜುಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಾಸು ನೇತೃತ್ವದಲ್ಲಿ ಪ್ರತಿಭಟನೆ: ನಗರ ಯುವ ಕಾಂಗ್ರೆಸ್‌ವತಿಯಿಂದ ನಗರದ ಯಾದವಗಿರಿ ಆಕಾಶವಾಣಿ ಹಾಗೂಗೋಕುಲಂ ಮುಂಭಾಗವಿರುವ ಪೆಟ್ರೋಲ್‌ ಬಂಕ್‌ ನಲ್ಲಿಮಾಜಿ ಶಾಸಕ ವಾಸು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಯುವ ಕಾಂಗ್ರೆಸ್‌ ರಾಜ್ಯಕಾರ್ಯದರ್ಶಿ ದೀಪಕ್‌ ಶಿವಣ್ಣ, ನಗರ ಯೂತ್‌ ಕಾಂಗ್ರೆಸ್‌ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌, ಉಪಾಧ್ಯಕ್ಷ ಸಯ್ಯದ್‌ಅಬ್ರಾರ್‌, ಯೂತ್‌ ಕಾಂಗ್ರೆಸ್‌ ಮುಖಂಡ ಮನೋಜ್‌,ಐಟಿ ಸೆಲ್‌ ವಿನೋದ್‌, ಬ್ಲಾಕ್‌ ಅಧ್ಯಕ್ಷರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next