ಮಹಾನಗರ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂ ರಾಮ್ ಗೋಡ್ಸೆಯ ಪರವಾಗಿ ಟ್ವಿಟ ರ್‌ನಲ್ಲಿ ಬರೆದುಕೊಂಡ ನಳಿನ್ ಕುಮಾರ್ ಕಟೀಲು ವಿರುದ್ಧ ಬಿಜೆಪಿ ಕಠಿನ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಬಿ.ರಮಾ ನಾಥ ರೈ ಆಗ್ರಹಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು ಅವರು ತಮ್ಮ ಟ್ವಿಟರ್‌ನಲ್ಲಿ ಅವಹೇಳ ನಕಾರಿ ಯಾಗಿ ಬರೆದಿರುವುದಾಗಿ ಆರೋ ಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿಯವರ ಪ್ರತಿಮೆ ವಿಶ್ವದ 140 ದೇಶಗಳಲ್ಲಿವೆ.ಅವರ ಹುಟ್ಟು ಹಬ್ಬ ವನ್ನು ಪ್ರಪಂಚಾದ್ಯಂತ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹ ಮಹಾ ತ್ಮನ ಬಗ್ಗೆ ಕೀಳು ಭಾವನೆ ಸಲ್ಲದು.ಗಾಂಧೀಜಿ ಹೋರಾಟ ನಡೆಸಿ ಸ್ವಾತಂತ್ರÂ ತಂದು ಕೊಟ್ಟು ಗಣತಂತ್ರ ದೇಶವನ್ನಾಗಿಸಿದ ಪರಿಣಾಮ ಇಂದು ಇವರು ಪ್ರಧಾನಿ, ಸಂಸದರಾಗಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಸುರೇಶ್ ಬಲ್ಲಾಳ್, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ದ.ಕ. ಜಿಲ್ಲಾ ಉಪಾಧ್ಯಕ್ಷ ಬಾಲರಾಜ್ ರೈ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸದಾ ಶಿವ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ, ಜೆಸಿಂತಾ ಆಲ್ಫೆ†ಡ್, ಶಕುಂತಲಾ ಕಾಮತ್, ಆಶಾ ಡಿ’ಸಿಲ್ವಾ, ವಾಸು ಪೂಜಾರಿ,ರತಿಕಲಾ ಕೊಟ್ಟಾರಿ,ವೆಂಕಪ್ಪ ಪೂಜಾರಿ,ಬಿ.ಎಂ.ಅಬ್ಟಾಸ್ ಅಲಿ,ಅಶ್ರಫ್ ಸೇವಾದಳ, ಎ.ಸಿ. ವಿನಯರಾಜ್,ರಮಾನಂದ ಪೂಜಾರಿ,ಟಿ.ಕೆ. ಸುಧೀರ್, ನೀರಜ್ ಪಾಲ್,ಗಣೇಶ್ ಪೂಜಾರಿ,ಸಂತೋಷ್ ಕುಮಾರ್ ಶೆಟ್ಟಿ,ನಝೀರ್ ಬಜಾಲ್, ಬಿ.ಎಂ.ಭಾರತಿ,ಸಿ.ಎಂ.ಮುಸ್ತಫಾ, ಎಂ.ಪಿ.ಮನುರಾಜ್,ಮಲಾರ್ ಮೋನು ಮತ್ತಿತರರು ಉಪಸ್ಥಿತರಿದ್ದರು.ಯು.ಎಚ್.ಖಾಲಿದ್ ಉಜಿರೆ ನಿರೂಪಿಸಿದರು. ಬಿ.ಎ.ಮಹಮ್ಮದ್ ಹನೀಫ್ ವಂದಿಸಿದರು.
ಕಠಿನ ಕ್ರಮ
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಮಾತನಾಡಿ,ರಾಷ್ಟ್ರಪಿತನನ್ನು ಹತ್ಯೆ ಮಾಡಿ ದವನನ್ನು ವೈಭವೀಕರಣ ಮಾಡುವ ಮೂಲಕ ಬಿಜೆಪಿಯ ಸಚಿವರು, ಸಂಸದರು ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ಮಾತುಗಳನ್ನಾಡದಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.