Advertisement

ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

12:26 PM May 18, 2018 | |

ವಿಜಯಪುರ: ಸ್ಪಷ್ಟ ಬಹುಮತ ಇಲ್ಲದಿದ್ದರೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಲು ರಾಜ್ಯಪಾಲರು ಸಂವಿಧಾನ ಬಾಹೀರವಾಗಿ ಅವಕಾಶ ನೀಡಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಗುರುವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ, ರಾಜ್ಯಪಾಲ ವಜುಭಾಯಿವಾಲಾ ಅವರ ವಿರುದ್ಧ ದಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ರಾಜ್ಯದ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆಗಾಗಿ ಕಾಂಗ್ರೆಸ್‌ ಪಕ್ಷದ ಶಾಸಕರು ಜೆಡಿಎಸ್‌ ಪಕ್ಷಕ್ಕೆ ಬೆಂಬಲ ಘೋಷಿಸಿ, ಬಹುಮತಕ್ಕೆ ಅಗತ್ಯ ಇರುವುದಕ್ಕಿಂತ 118 ಶಾಸಕರ ಸಹಿ ಇರುವ ಮೈತ್ರಿ ಪತ್ರವನ್ನು ರಾಜ್ಯಪಾಲರಿಗೆ ಪಟ್ಟಿ ಸಲ್ಲಿಸಲಾಗಿದೆ. 

ಆದರೂ ಯಾವ ಶಾಸಕರ ಬೆಂಬಲವೂ ಇಲ್ಲದ 104 ಸದಸ್ಯ ಬಲದ ಬಿಜೆಪಿ ಸರಕಾರ ರಚಿಸಲು ಯಡಿಯೂರಪ್ಪ ಅವರಿಗೆ ಅವಕಾಶ ಕಲ್ಪಿಸಿರುವುದು ಸಂವಿಧಾನ ಬಾಹಿರ ಕ್ರಮ ಎಂದು ಕಿಡಿ ಕಾರಿದರು. ಕರ್ನಾಟಕದ ಜನತೆಯ ಭಾವನೆ‌ಗೆ ವಿರುದ್ಧವಾಗಿ ರಾಜ್ಯಪಾಲರು ಕೈಗೊಂಡಿರುವ ಕ್ರಮ ಅಸಂವಿಧಾನಿಕ ಹಾಗೂ ಖಂಡನಾರ್ಹ. ಹೀಗಾಗಿ ರಾಜ್ಯದಲ್ಲಿ ಕಾನೂನು ಬಾಹೀರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.  ಹೀಗಾಗಿ ತಕ್ಷಣ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕರ್ನಾಟಕದಲ್ಲಿ ಮತದಾರರ ಭಾವನೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ನಗರ ಕ್ಷೇತ್ರ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಹಮೀದ ಮುಶ್ರೀಫ್‌ ಮಾತನಾಡಿ, ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

Advertisement

ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡದೇ ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು. ಲಕ್ಷ್ಮೀ ದೇಸಾಯಿ, ಮಹ್ಮದ್‌ ರಫಿಕ್‌ ಟಪಾಲ ಮಾತನಾಡಿದರು. ಚಾಂದಸಾಬ ಗಡಗಲಾವ, ವಸಂತ ಹೊನಮೊಡೆ, ಅಜಯ ಪರದೇಶಿ, ಸುಭಾಷ ತಳಕೇರಿ, ಗಂಗಾಧರ ಸಂಬಣ್ಣಿ, ಅಪ್ತಾಪ ಖಾದ್ರಿ ಇನಾಮದಾರ, ಜ್ಯೋತಿರಾಮ ಪವಾರ, ಜಮೀರ ಬಾಂಗಿ, ಹಾಜಿಲಾಲ ದಳವಾಯಿ, ದಾವಲಸಾಬ ಬಾಗವಾನ, ಬಿ.ಎಸ್‌.ಬ್ಯಾಳಿ,
ಜಯಶ್ರೀ ಭಾರತೆ, ಸುಜಾತ ಕಳ್ಳಿಮನಿ, ಮಂಜುಳಾ ಗಾಯಕವಾಡ, ರಾಜಶ್ರೀ ಚೋಳಕೆ, ಗಂಗೂಬಾಯಿ ಧುಮಾಳೆ, ಸಮದ ಸುತಾರ, ಸುರೇಂದ್ರ ಬಾವಿಮನಿ, ತಾಜುದ್ದೀನ ಖಲೀಪ, ಬಾಬಾಸಾಬ ಯಳವಾರ, ಎಂ.ಎ.ಭಕ್ಷಿ, ಗುಡುಸಾಬ ತೊರಗಲ್‌ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next