ಮಾಗಡಿ: “ಅಚ್ಚೇ ದಿನ್ ಆಯೇಗಾ.. ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸಂಕಷ್ಟದ ದಿನವನ್ನು ತಂದೊಡ್ಡಿದ್ದಾರೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕಲ್ಯಾಗೇಟ್ ವೃತ್ತದಿಂದ ತಾಲೂಕು ಕಚೇರಿವರೆಗೂ ಎತ್ತಿನಗಾಡಿ ಓಡಿಸಿಕೊಂಡು, ಬಳಿಕ ಬೃಹತ್ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ದಿನೇ ದಿನೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಸರ್ಕಾರ ಶೀಘ್ರ ತೈಲ ಹಾಗೂ ದಿನ ಬಳಕೆ ವಸ್ತುಗಳಬೆಲೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ,ರಾಜ್ಯಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್‌ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಜೆಪಿ ಸರ್ಕಾರಕ್ಕೆ ಕಡಿವಾಣ: ಬಿಜೆಪಿ ಸರ್ಕಾರ ಜನಪರವಾದ ಆಡಳಿತ ನೀಡುತ್ತಿಲ್ಲ. ಕೇವಲ ಶ್ರೀಮಂತ ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ರೈತರು ಬೀದಿಗೆ ಬಂದಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ. ಜನರ ಸಂಕಷ್ಟ ಕೇಳುವವರಿಲ್ಲ. ಬಿಜೆಪಿ ಸರ್ಕಾರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಿದೆ. ಬೆಲೆ ಏರಿಕೆಯಿಂದ ನೊಂದಿರುವ ಬಡವರು, ಕೂಲಿ ಕಾರ್ಮಿಕರು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಸಂಘಟಿತ ರಾಗಿದ್ದಾರೆ. ಕಾಂಗ್ರೆಸ್‌ನ ಸಂಘಟನಾಶಕ್ತಿಯೇ, ಬಿಜಿಪಿ ಸರ್ಕಾರದ ಪಥನಕ್ಕೆ ಅಂಕುಶ ಹಾಕಲಿದೆ ಎಂದು ತಿಳಿಸಿದರು.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮತ್ತು ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎರಡು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿಯಲ್ಲಿ ಜಮಾಯಿಸಿದ್ದರು. ಅಡುಗೆ ಅನಿಲ್, ಅಣಕು ಶವ ಯಾತ್ರೆ ನಡೆಸಿದರು.
ರಾಮನಗರ ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶಶಾಂಕ್ ರೇವಣ್ಣ, ಬಿಜೆಪಿ ಸರ್ಕಾರದ ಪೊಳ್ಳು ಭರವಸೆಗಳ ವಿರುದ್ಧ ಹರಿಹಾಯ್ದು, ತೈಲ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದರು. ಇದೇ ವೇಳೆ ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್‌ಗೆ ಮನವಿ ಪತ್ರ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ತಾಪಂ ಅಧ್ಯಕ್ಷೆ ಸುಧಾ ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಜಿಪಂ ಸದಸ್ಯೆ ನಾಗರತ್ನ, ದಿಶಾ ಕಮಿಟಿ ಸದಸ್ಯಜೆ.ಪಿ.ಚಂದ್ರೇಗೌಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್, ಸದಸ್ಯರಾದ ವೆಂಕಟೇಶ್, ಸುಮಾ, ಮಾಜಿ ಅಧ್ಯಕ್ಷ ಕೆ.ಎಚ್. ಶಿವರಾಜು, ನಾರಾಯಣಪ್ಪ, ಜಯಶಂಕರ್,ಪುರಸಭಾ ಸದಸ್ಯ ಎಚ್.ಜೆ. ಪುರುಶೋತ್ತಮ್, ರಿಯಾಜ್, ಶಿವಕುಮಾರ್, ರಘು, ಗುರುಸ್ವಾಮಿ, ತೋ.ವಿ.ಗಿರೀಶ್, ಕಲ್ಲೂರು ಶಿವಣ್ಣ, ಜಯರಾಮು, ಶಿವಪ್ರಸಾದ್, ಭವ್ಯಾ,ಹನುಮಂತರಾಯಪ್ಪ, ತೇಜ, ಆನಂದ್, ಪ್ರಶಾಂತ್, ಡೇರಿ ನರಸಿಂಹಮೂರ್ತಿ, ಆಗ್ರೋ ಪುರುಶೋತ್ತಮ್, ಕುಮಾರ್, ಲೋಕೇಶ್, ನಾಗೇಶ್, ನರಸಿಂಹಮೂರ್ತಿ, ಬಿ.ಟಿ. ವೆಂಕಟೇಶ್, ರವೀಂದ್ರ, ರಂಗನಾಥ್, ಶ್ರೀನಿವಾಸ್, ಎಸ್.ಕಾಂತರಾಜು, ಪಂಚ ಲಿಂಗಯ್ಯ, ಪಾಪಣ್ಣ, ಶಿವಣ್ಣ,, ರವಿಕುಮಾರ್, ರಂಗಸ್ವಾ,ಮಿ ಇದ್ದರು.