Advertisement
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಭೂಸಂತ್ರಸ್ತರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ತುಮಕೂರಿನಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾರಂಭಗೊಂಡಿದ್ದು, ಇದರಿಂದನೂರಾರು ರೈತರು ತಮ್ಮ ಜಮೀನು, ಮನೆ, ಅಂಗಡಿ ಮಳಿಗೆಗಳನ್ನು ಕಳೆದುಕೊಂಡಿದ್ದಾರೆ. ಆದರೆ ಆರುವರ್ಷಗಳಿಂದ ನೋಟಿಸ್ ನೀಡಿದ್ದು, ಬಿಟ್ಟರೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.ಭೂ ಕಾಯ್ದೆ ಪ್ರಕಾರ ಭೂಮಿ ಕಳೆದುಕೊಂಡವರಿಗೆಒಂದು ವರ್ಷದೊಳಗೆ ಪರಿಹಾರ ನೀಡಬೇಕು. ಆದರೆ ಇಷ್ಟು ವರ್ಷಗಳಾದರೂ ಜಿಲ್ಲಾಧಿಕಾರಿಗಳಾಗಲಿ, ಸರ್ಕಾರವಾಗಲಿ ಯಾವುದೇ ಪರಿಹಾರ ನೀಡಲುಕ್ರಮ ಕೈಗೊಳ್ಳದೆ ರೈತರ ಜೀವನವನ್ನು ಸಂಕಷ್ಟಕ್ಕೀಡು ಮಾಡಿದೆ.
Related Articles
Advertisement
ಪ್ರತಿಭಟನೆಯಲ್ಲಿ ಭೂಮಿ ಕಳೆದುಕೊಂಡಸಂತ್ರಸ್ತರಾದ ಲಕ್ಷ್ಮೀಶ್, ಶಶಿಧರ್, ದೇವರಾಜು, ಪ್ರಕಾಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಂತ್ರಸ್ತರು ಭಾಗವಹಿಸಿ ತಮ್ಮ ನೋವು ತೋಡಿಕೊಂಡರು.
ಕಚೇರಿಗೆ ಅಲೆದಾಟ : ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜುಮಾತನಾಡಿ, ಭೂಮಿ ಸರ್ವೆ ಮಾಡಿ ಆರು ವರ್ಷಗಳಾದರೂ ಪರಿಹಾರ ನೀಡಿಲ್ಲ.ಇಲಾಖೆಗಳಿಗೆ ಅಲೆದು ಅಲೆದು ಸಾಕಾಗಿದೆ.ನಿಟ್ಟೂರು, ಮಲ್ಲಸಂದ್ರ ಭಾಗದಲ್ಲಿ ಪರಿಹಾರನೀಡಲಾಗಿದೆ. ಈ ಭಾಗದ ಜನರಿಗೆ ಅನ್ಯಾಯಮಾಡುತ್ತಿದ್ದು, ಇದೇ ರೀತಿ ಮುಂದುವರಿದರೆಸಾವಿರಾರು ರೈತರ ಜೊತೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಜೀವನ ನಿರ್ವಹಣೆ ಹೇಗೆ? :
ಜಿಪಂ ಮಾಜಿ ಸದಸ್ಯ ಪಂಚಾಕ್ಷರಿ ಮಾತನಾಡಿ, ಭೂಮಿ ಕೊಡಲು ನಾವೇನು ತಕರಾರು ಮಾಡಿಲ್ಲ, ಸರ್ಕಾರ ನೀಡಿದ ಬೆಲೆಗೆ ನಮ್ಮ ಭೂಮಿಯನ್ನು ನೀಡುತ್ತಿದ್ದೇವೆ. ಭೂಮಿ ಕೊಟ್ಟರೂ ಹಣ ಕೊಡದಿದ್ದರೆ ಜೀವನ ನಿರ್ವಹಿಸುವುದು ಹೇಗೆ? ಸರ್ಕಾರ,ಜನಪ್ರತಿನಿಧಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ರಸ್ತೆಯಲ್ಲಿಕುಳಿತು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಗಳನ್ನೇ ಸ್ಥಳಕ್ಕೆ ಕರೆಯಿಸುತ್ತೇವೆಂದು ಎಚ್ಚರಿಸಿದರು.