ಪಾವಗಡ: ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ, ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯದ ಮೂಲಕ ಬಿಜೆಪಿ ಸರ್ಕಾರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸುದೇಶ್ ಕುಮಾರ್ ನೇತೃತ್ವದಲ್ಲಿ ಪಾವಗಡ ತಾಲೂಕು ಕಾಂಗ್ರೆಸ್ ಸಮಿತಿ ಮಂಗಳವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ವೆಂಕಟರಮಣಪ್ಪ, ಬಿಜೆಪಿ ಪಕ್ಷ ಕಾಂಗ್ರೆಸ್ ನಾಯಕರ ಮೇಲೆ ಅನಗತ್ಯವಾಗಿ ಕಿರುಕುಳ ನೀಡುವುದರೊಂದಿಗೆ ದ್ವೇಷದ ರಾಜಕಾರಣ ನಡೆಸುತ್ತಿದೆ. ಇಂತಹ ಕೃತ್ಯವನ್ನು ದೇಶದಲ್ಲಿ ಎಲ್ಲಪಕ್ಷಗಳು ಖಂಡಿಸುತ್ತಿವೆ. ಆದರೂ ಬಿಜೆಪಿ ದ್ವೇಷದ ರಾಜ ಕೀಯ ಬಿಟ್ಟಿಲ್ಲ. ದೆಹಲಿಯ ಕಾಂಗ್ರೆಸ್ ಪಕ್ಷದ ಕಚೇರಿಗೆ ಜನಪ್ರತಿನಿಧಿಗಳು, ಪದಾಧಿಕಾರಿಗಳು ಪ್ರವೇಶಿಸ ದಂತೆ ನಿರ್ಬಂಧ ವಿಧಿಸಲಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ .ವಿ.ವೆಂಕಟೇಶ್, ಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸುದೇಶ್ ಬಾಬು, ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್, ಮುಖಂಡ ಶಂಕರ್‌ರೆಡ್ಡಿ, ಪುರಸಭೆ ಸದಸ್ಯರಾದ ರಾಜೇಶ್, ಟೆಂಕಾಯಲ ರವಿ, ಮಹಮ್ಮದ್ ಇಮ್ರಾನ್, ವೇಲುರಾಜ್, ನಾಗಭೂಷಣರೆಡ್ಡಿ ಮಾತನಾಡಿದರು.
ಪುರಸಭೆ ಸದಸ್ಯರಾದ ವಿಜಯ್‌ಕುಮಾರ್, ವೆಂಕ ಟರಮಣ, ಪಕ್ಷದ ಮುಖಂಡರಾದ ಪ್ರಮೋದ್ ಕುಮಾರ್, ಎಂ.ಎಸ್.ವಿಶ್ವನಾಥ್, ಷಾಬಾಬು, ರೊಪ್ಪ ನಾಗರಾಜು, ಹನುಮಂತರಾಯ, ರಿಜ್ವಾನ್ ಉಲ್ಲಾ, ಪರಮೇಶ್, ಕೋಳಿ ಬಾಲಾಜಿ, ಭಾಸ್ಕರ್ ನಾಯ್ಡು, ಯೂತ್ ಕಾಂಗ್ರೆಸ್ ಸುಜೀತ್, ಮಹೇಶ್, ಹನುಮೇಶ್, ಅವಿನಾಶ್, ಅಲಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ತಹಶೀಲ್ದಾರ್ ಕಚೇರಿ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆಸಿ ನಂತರ ಗ್ರೇಡ್ -2 ತಹಶೀಲ್ದಾರ್ ಸುಮತಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಲಾಯಿತು.