Advertisement
ನಗರದ ಕಾಂಗ್ರೆಸ್ ಕಚೇರಿ ಎದುರು ಕಾಂಗ್ರೆಸ್ ಮುಖಂಡರೊಂದಿಗೆ ಬೈಸಿಕಲ್ ಏರಿದ ಶಾಸಕ ಎಚ್.ಪಿ.ಮಂಜುನಾಥ್ ಮತ್ತಿತರ ಮುಖಂಡರು, ಕಲ್ಪತರು ವೃತ್ತದ ಬಳಿ ಜೋಡೆತ್ತಿನ ಗಾಡಿಯಲ್ಲಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ, ತಹಸೀಲ್ದಾರ್ ಬಸವರಾಜುರಿಗೆ ಮನವಿ ಸಲ್ಲಿಸಿದರು. ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಯುವಪಡೆ ಬೈಸಿಕಲ್, ೫೦ಕ್ಕೂ ಹೆಚ್ಚು ಜೋಡೆತ್ತಿನ ಗಾಡಿಗಳಲ್ಲಿ ಮುಖಂಡರು ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಾಗಿಬಂದರು.
Related Articles
Advertisement
ಎರಡು ಬಾರಿ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪನವರು ತಾಲೂಕಿಗೆ ಮಲತಾಯಿ ಧೋರಣೆ ತಳೆದಿದ್ದಾರೆ,ಅರಸರು ತಾಲೂಕಿಗಲ್ಲದೆ ರಾಜ್ಯ-ದೇಶಕ್ಕೆ ಅಪಾರ ಕೊಡುಗೆ ನೀಡಿದ್ದರು, ಹೆಗ್ಗಡೆಯುವರ ಅವಧಿಯಲ್ಲಿ ಚಂದ್ರಪ್ರಭಾಅರಸ್ ಕಟ್ಟೆಕಟ್ಟಿ ಕಾಲರ ಸಾಂಕ್ರಾಮಿಕ ರೋಗ ತೊಲಗಲು ಕಾರಣರಾಗಿದ್ದರು. ಆಸ್ಪತ್ರೆ ನಿರ್ಮಿಸಿದ್ದರು. ಇನ್ನು ಸಿದ್ದರಾಮಯ್ಯನವರ ಅವಧಿಯಲ್ಲಿ ಸಾವಿರಾರು ಕೋಟಿ ರೂಗಳ ಅಭಿವೃದ್ದಿ ಕಾರ್ಯ ನಡೆಯಿತು. ಆದಿನಗಳ ಅವಧಿಯ ಕಾಮಗಾರಿಗಳೇ ಇನ್ನೂ ನಡೆಯುತ್ತಿವೆ, ಯಡಿಯೂರಪ್ಪನವರು ಎರಡು ಮಠಕ್ಕೆ ತಲಾ ೫೦ ಲಕ್ಷ ನೀಡಿದ್ದರೆ, ಸಿದ್ದರಾಮಯ್ಯನವರು ಎರಡೆರಡು ಕೋಟಿ ನೀಡಿದ್ದಾರೆ. ತಾಲೂಕಿಗೆ ಯಾವುದೇ ಹೊಸ ಯೋಜನೆಗಳಿಗೆ ಅನುದಾನ ನೀಡದೆ ಅನ್ಯಾಯ ಮಾಡಿದ್ದಾರೆ.
ಹುಣಸೂರಿನ ಋಣದಿಂದಲೇ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ಹುಣಸೂರನ್ನೇ ಮರೆತಿದ್ದಾರೆಂದು ಶಾಸಕ ಎಚ್.ಪಿ.ಮಂಜುನಾಥ್ ಛೇಡಿಸಿದರು.
ಹುಣಸೂರಿನಲ್ಲಿ ಪಕ್ಷದವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಗೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು ಇಲ್ಲಿನ ಮತದಾರರು ಎಚ್‌ವಿಶ್ವನಾಥರ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದರು. ನಂತರದಲ್ಲಿ ವಿಶ್ವನಾಥರು ಬಿಜೆಪಿಗೆ ಹೋಗಿದ್ದರಿಂದಾಗಿ ನೀವು ಮುಖ್ಯ ಮಂತ್ರಿಯಾಗಿದ್ದೀರಾ ಯಡಿಯೂರಪ್ಪನವರೇ, ಇಲ್ಲಿನ ಜನರಿಗೆ ಬೇಕಾದ ಯೋಜನೆಗಳಿಗೆ ಅನುದಾನ ನೀಡುವ ಮೂಲಕವಾದರೂ ಈ ಜನರ ಋಣ ತೀರಿಸಬೇಕೆಂದರು. ಇನ್ನು ಎಂಎಲ್.ಸಿ.ವಿಶ್ವನಾಥ್ ಸಾಹೇಬರು ಸಹ ಮುಖ್ಯಮಂತ್ರಿ ಆಪ್ತ ಸಹಾಯಕ ಲೋಕೇಶ್‌ರೊಂದಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯದ ವಿಚಾರವಾಗಿ ತರಾಟೆ ತೆಗೆದುಕೊಂಡಿದ್ದಾರೆ, ಹೀಗಿದ್ದರೂ ಕಿಲುಬು ಕಾಸು ನೀಡಿಲ್ಲ, ಸರಕಾರ ರಚನೆಗೆ ನೆರವಾದವರನ್ನೇ ಕಡೆಗಣಿಸುವುದು ನಾಚಿಕೆಗೇಡೆಂದು ಛೇಡಿಸಿ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ರನ್ನು ಸಂಪರ್ಕಿಸಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಮನವಿ ಮಾಡಿದ್ದೇನೆಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಇನ್ನು ಸಮರ್ಥ ಪ್ರಧಾನಿ ಯಾಗಬೇಕೆಂದಿದ್ದ ಮೋದಿಯವರೇ 7 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ, ೭೦ ವರ್ಷ ದೇಶವನ್ನು ಹಾಳು ಮಾಡಿದೆ ಎನ್ನುವವವರು ಕೇಂದ್ರದಲ್ಲಿ ಅಧಿಕಾರಕ್ಕೇರಿದ ಕೇವಲ ೭ ವರ್ಷದಲ್ಲೇ ದೇಶವನ್ನು ಅಧೋಗತಿಗಿಳಿಸಿದೆ, ಜಿಡಿಪಿ ದರ ಕುಸಿದಿದೆ, ಪೆಟ್ರೋಟ್ ದರ ೪೦ರೂ ಹೆಚ್ಚಿದೆ ಇದೇನಾ ಅಚ್ಚೆದಿನ್ ಎಂದು ಟೀಕಿಸಿದರು.
ಈ ವೇಳೆ ಡಾ.ಪುಷ್ಪಅಮರ್‌ನಾಥ್, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಡಿಸಿಸಿಯ ಸುರೇಶ್ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಅನುಷಾರಘು, ವೀಕ್ಷಕ ಲೋಕೇಶ್, ಟಿಎಪಿಸಿಎಂ.ಎಸ್ ಅಧ್ಯಕ್ಷ ಅಸ್ವಾಳುಕೆಂಪೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ್, ಕಲ್ಕುಣಿಕೆರಮೇಶ್, ದೇವರಾಜ್, ಸ್ವರೂಪ್, ಮುಖಂಡರಾದ ಶಿವನಾಗಪ್ಪ, ಲೋಕೇಶ್, ರಾಜುಶಿವರಾಜೇಗೌಡ, ರಾಘು, ಸೇರಿದಂತೆ ಕಾರ್ಯಕರ್ತರ ಪಡೆ ಇತ್ತು.