ಕಾಪು : ಕೇಂದ್ರ ಮತ್ತು ರಾಜ್ಯ ಸರಕಾರದ ತೈಲ ಬೆಲೆ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್‌ನ ವತಿಯಿಂದ ಸೈಕಲ್ ಜಾಥಾ ಮತ್ತು ರಸ್ತೆಯ ಮಧ್ಯೆ ಕಟ್ಟಿಗೆ ಇಟ್ಟು ಒಲೆ ಉರಿಸುವ ಮೂಲಕ ಶನಿವಾರ ಕಾಪು ಪೇಟೆಯಲ್ಲಿ ಸಾಂಕೇತಿಕ ಅಣುಕು ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ದರವನ್ನು ಗಗನಕ್ಕೆ ಏರಿಸಿದೆ. ಜನರ ಮನವಿ, ಬೇಡಿಕೆ, ಪ್ರತಿಭಟನೆಗಳಿಗೆ ಬೆಲೆಕೊಡದೇ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಕೊರೊನಾ ಮೂರನೇ ಅಲೆ ನಿಯಂತ್ರಣ, ಬೆಲೆಯೇರಿಕೆ ನಿಯಂತ್ರಿಸಲು ಯೋಜನೆ ರೂಪಿಸುವುದರ ಬದಲಾಗಿ ಮುಂದಿನ ಚುನಾವಣೆಗೆ ಪೂರ್ವಭಾವಿ ಸಿದ್ಧತೆ ನಡೆಸುವ ಭರದಲ್ಲಿವೆ ಎಂದು ಆರೋಪಿಸಿದರು.
ಇದನ್ನೂ ಓದಿ : ಸೈಕಲ್‌ನಲ್ಲಿ ಓಡಾಡಿದರೆ ವ್ಯಾಯಾಮ ಚೆನ್ನಾಗಿ ಆಗುತ್ತೆ, ರೋಗ ಬರಲ್ಲ : ದಾವಣಗೆರೆ ಸಂಸದ
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಉಡುಪಿ ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ವೀಕ್ಷಕ ಅನಿಲ್ ಕುಮಾರ್ ಮಂಗಳೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾಽಕ್ ದೀನಾರ್, ಪಕ್ಷದ ಮುಖಂಡರಾದ ವೈ. ಸುಕುಮಾರ್, ಅಬ್ದುಲ್ ಅಜೀಜ್, ವೈ. ಸುಧೀರ್ ಕುಮಾರ್, ಕೆ.ಎಚ್. ಉಸ್ಮಾನ್, ವಿಕ್ರಂ ಕಾಪು, ಗಣೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಅಶ್ವಿನಿ ನವೀನ್, ಜ್ಯೋತಿ ಮೆನನ್, ಜಿತೇಂದ್ರ ಪುಟಾರ್ಡೊ, ದಿನೇಶ್ ಕೋಟ್ಯಾನ್, ಯು. ಸಿ. ಶೇಖಬ್ಬ, ಶಾಂತಲಾ ಶೆಟ್ಟಿ, ಸೌಮ್ಯ, ಮೀರ್ ಮಹಮ್ಮದ್, ಕರುಣಾಕರ ಪೂಜಾರಿ, ಸುಽರ್ ಕರ್ಕೇರ, ಕೇಶವ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು