Advertisement

ವಿದ್ಯುತ್‌ ಬೆಲೆ ಏರಿಕೆ ವಿರೋಧಿಸಿ “ಕೈ’ಪ್ರತಿಭಟನೆ

03:34 PM Nov 20, 2020 | Suhan S |

ವಿಜಯಪುರ: ರಾಜ್ಯ ಸರ್ಕಾರ ವಿದ್ಯುತ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ಇಳಿದ ಕಾಂಗ್ರೆಸ್‌ ಕಾರ್ಯಕರ್ತರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಡಿ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಹಾಸಿಂಪೀರ ವಾಲಿಕಾರ ಮಾತನಾಡಿ, ರಾಜ್ಯದ ಜನ ಆರ್ಥಿಕ ವಿಷಮ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು, ಹೆಚ್ಚಿನಹಣಕಾಸು ಹೊಂದಿಸಲಾರದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್‌ ಬೆಲೆ ಏರಿಕೆ ಮಾಡಿ ಸಮರ್ಥನೀಯವಲ್ಲದ ಅಮಾನವೀಯ ಕೆಲಸಕ್ಕೆ ಮುಂದಾಗಿದೆ. ಹೀಗಾಗಿ ರಾಜ್ಯಪಾಲರು ಕೂಡಲೇ ವಿದ್ಯುತ್‌ ದರ ಏರಿಕೆ ಮಾಡಿರುವ ಸರ್ಕಾರದ ಆದೇಶ ರದ್ದು ಮಾಡಬೇಕೆಂದು ಹರಿಹಾಯ್ದರು.

ಜನರು ಕೋವಿಡ್‌ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಜನರ ಜೊತೆ ಸಹಾನುಭೂತಿಯಿಂದ ವರ್ತಿಸಬೇಕು. ವಿಷಮ ಪರಿಸ್ಥಿತಿಗಳಲ್ಲಿ ಜನತೆಗೆ ನೀಡುವ ಸೇವೆಯಲ್ಲಿ ರಿಯಾಯ್ತಿ ನೀಡಿನೆರವಿಗೆ ಧಾವಿಸಬೇಕಿರುವುದು ಜನಪರ ಸರ್ಕಾರದ ಆದ್ಯತೆ. ಆದರೆ ಇಂಥ ರಾಜಧರ್ಮ ಬದಿಗೊತ್ತಿ, ರಿಯಾಯಿತಿ ನೀಡಬೇಕಾದ ಸರ್ಕಾರವೇ ಈಗ ವಿದ್ಯುತ್‌ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹೇರಿದೆ. ರಾಜ್ಯದ ಜನರಿಗೆ ದೀಪಾವಳಿ ಹಾಗೂ ರಾಜ್ಯೋತ್ಸವದ ಕೊಡುಗೆಯಾಗಿ ನ.1ರಿಂದಲೇ ವಿದ್ಯುತ್‌ ಪರಿಷ್ಕೃತ ದರಕ್ಕೆ ಆದೇಶಿಸಿದೆ. ಇದರಲ್ಲಿ ಸರಾಸರಿ ಶೇ.5.4ರಂತೆ ಅಂದರೆ ಪ್ರತಿ ಯೂನಿಟ್‌ಗೆ 40 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಕೋವಿಡ್‌ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು. ಇದನ್ನು ಮರೆತು ಆಡಳಿತ ನಡೆಸುತ್ತಿರುವ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ವಿದ್ಯುತ್‌ ದರ ಏರಿಕೆ ವಿರೋಧಿ  ಸುತ್ತದೆ. ರಾಜ್ಯದ ರಾಜ್ಯಪಾಲರು ಕೂಡಲೇ ತಮಗೆ ಸಂವಿಧಾನದತ್ತವಾಗಿ ಇರುವ ಅಧಿಕಾರ ಬಳಸಿ ವಿದ್ಯುತ್‌ ದರ ಏರಿಕೆ ರದ್ದು ಮಾಡಬೇಕೆಂದು ಆಗ್ರಹಿಸಿದರು.

Advertisement

ಅಬ್ದುಲ್‌ ಹಮೀದ ಮುರ್ಶಿಫ್‌, ಎಂ.ಎಂ. ಸುತಾರ, ಜೋತಿರಾಮ ಪವಾರ, ಆಜಾದ ಪಟೇಲ, ರಾಜು ಆಲಗೂರು ಮಾತನಾಡಿದರು. ಈ ವೇಳೆ ಚಾಂದಸಾಬ ಗಡಗಲಾವ, ವಿಶ್ವನಾಥ ಮಠ, ಮಹ್ಮಮದ ರಫೀಕ ಠಪಾಲ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪುರ, ಅಬ್ದುಲ ಖಾದರ, ಖಾಮ, ಜಮೀರ ಅಹ್ಮದ ಬಾಗಲಕೋಟ, ಉಸ್ಮಾನ ಪಟೇಲ, ಖಾನವಾಲೆ, ಸಾಹೇಬಗೌಡ ಬಿರಾದಾ, ಬಾಳನಗೌಡ ಪಾಟೀಲ, ಪೀರಪ್ಪ ನಡುವಿನಮನಿ, ಎಸ್‌.ದುಂಡಸಿ, ಶಬ್ಬಿರ ಜಾಗಿರದಾರ, ವಸಂತಹೊನಮೊಡೆ, ಐ.ಎಂ. ಇಂಡಿಕರ, ಪಿ.ಎಚ್‌. ಕಲಾಲ, ಸುರೇಶ ಗೊಣಸಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next