ದೊಡ್ಡಬಳ್ಳಾಪುರ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಂಡು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಕಾರ್ಯಕರ್ತರು, ತಾಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಜನಜಾಗೃತಿ ಮೂಡಿಸುವ ಸಲುವಾಗಿಹಾಗೂ ರಾಜಕೀಯ ದುರುದ್ದೇಶದಿಂದ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವ ಬಿಜೆಪಿಸರ್ಕಾರದ ವಿರುದ್ಧ ಜನರ ಗಮನ ಸೆಳೆಯಲು, ಈಪಥಸಂಚಲನವನ್ನು ನಡೆಸಲಾಗುತ್ತಿದೆ. 52 ವರ್ಷಆರ್‌ಎಸ್‌ಎಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರಲಿಲ್ಲ. ಜನ ಸಂಘವಾಗಲಿ, ಆರ್‌ಎಸ್‌ಎಸ್ ಅವರಿಗಾಗಲಿ ತ್ರಿವರ್ಣ ದ್ವಜದ ಬಗ್ಗೆ ಗೌರವ ಇರಲಿಲ್ಲ.ತ್ರಿವರ್ಣ ಧ್ವಜವನ್ನು ಅಪಮಾನಿಸಲು ಪಾಲಿಸ್ಟರ್ ಧ್ವಜ ಬಳಕೆಗೆ ಮೂಲಕ ಮುಂದಾಗಿದ್ದಾರೆ ಎಂದರು.
ರಾಷ್ಟ್ರಧ್ವಜಕ್ಕೆ ಅವಮಾನ: ಭಾರತದ ದೇಶದ ಭೂಭಾಗವನ್ನು ವಶಪಡಿಸಿಕೊಂಡಿರುವ ಚೀನಾದಿಂದ ಪಾಲಿಸ್ಟರ್ ಧ್ವಜ ತರಿಸುವ ರಾಷ್ಟ್ರ ದ್ರೋಹದಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ. ಧ್ವಜಸಂಹಿತೆ -2002ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜದ ಬಳಕೆಗೆ ಅನುಮತಿ ನೀಡುವ ಮೂಲಕ ಬಿಜೆಪಿ ಸರ್ಕಾರ ದೇಶ, ಗಾಂಧೀಜಿ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ ಎಂದರು.
ಜಾರಿ ನಿರ್ದೇಶನಾಲಯ ತನಿಖೆಗೆ ಖಂಡನೆ: ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಸರ್ಕಾರಗಳು ಹಲವಾರು ಸಾರ್ವಜನಿಕ ಉದ್ದಿಮೆ ಸ್ಥಾಪಿಸಿತ್ತು. 20ಕ್ಕೂ ಹೆಚ್ಚುಅಣೆಕಟ್ಟುಗಳನ್ನು ನಿರ್ಮಿಸಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ.ರಾಜ್ಯದಲ್ಲಿ ಸ್ವತಃ ಶಕ್ತಿಯಿಂದ ಅಧಿಕಾರಕ್ಕೆ ಬರದೇಆಪರೇಷನ್ ಕಮಲದ ಮೂಲಕ ಅಧಿಕಾರಪಡೆದಿದ್ದಾರೆ. ದೇಶದಲ್ಲಿ 16 ಕೋಟಿ ಉದ್ಯೋಗದಭರವಸೆಗೆ ಬರೀ 40 ಲಕ್ಷ ಉದ್ಯೋಗ ನೀಡಿದ್ದಾರೆ.ಅಗ್ನಿಪಥ್‌ನಿಂದ ಯುವಕರಿಗೆ ಉದ್ಯೋಗದಭವಿಷ್ಯ ಇಲ್ಲವಾಗಿದೆ. ನ್ಯಾಷನಲ್ ಹೆರಾಲ್ಡ್‌ನಲ್ಲಿಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೆ ನೀಡಿದ್ದ ಸಂಬಳವನ್ನು ದುರುಪಯೋಗ ಎಂದುಆರೋಪಿಸಿ, ರಾಜಕೀಯ ದುರುದ್ದೇಶದಿಂದ ಜಾರಿನಿರ್ದೇಶನಾಲಯದಿಂದ ತನಿಖೆ ಮಾಡಲಾಗು ತ್ತಿರುವುದು ಖಂಡನೀಯ ಎಂದರು.
ಜನೋತ್ಸವ ಸಾಧನೆಯಿಲ್ಲದ ಸುಳ್ಳಿನ ಉತ್ಸವ: ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, 2013ರಿಂದ 18ರವರೆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಇಎಸ್‌ಐಆಸ್ಪತ್ರೆ, ಯಲಹಂಕ- ದೊಡ್ಡಬಳ್ಳಾಪುರ ರಸ್ತೆಕಾಮಗಾರಿ, ತಾಯಿ-ಮಗು ಆಸ್ಪತ್ರೆ ಸೇರಿದಂತೆಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದ್ದು, ಸಾಧನಾ ಸಮಾವೇಶ ಮಾಡುವುದರಲ್ಲಿ ಅರ್ಥವಿತ್ತು. ಆದರೆ,ಬಿಜೆಪಿ ಸರ್ಕಾರದ ಸಾಧನೆ ತಾಲೂಕಿಗೆ ಏನೆಂಬುದೇ ತಿಳಿಯದೆ ಸಾಧನ ಸಮಾವೇಶ ಮಾಡಲು ಮುಂದಾಗಿದ್ದಾರೆ. ಈ ಜನೋತ್ಸವ ಸಾಧನೆಯಿಲ್ಲದ ಸುಳ್ಳಿನ ಉತ್ಸವವಷ್ಟೇ ಎಂದರು.
ಅಖಿಲ ಬಾರತ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ಬಲರಾಮ್‌ಸಿಂಗ್ ಬದರಿಯಾ, ಸೇವಾದಳದ ರಾಜ್ಯಾಧ್ಯಕ್ಷ ಎಂ. ರಾಮಚಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಂ. ಕಾಂತರಾಜ್, ನಗರಸಭಾ ಸದಸ್ಯ ಆನಂದ್, ನಾಗವೇಣಿ ಹಾಗೂ ಕಾಂಗ್ರೆಸ್ ಸೇವಾದಳ ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳು ಮುಖಂಡರು ಇದ್ದರು.
ಬಿಜೆಪಿ ಜನೋತ್ಸವ, ಸಾಧನೆ ಇಲ್ಲದ ಉತ್ಸವ :
ಸ್ವಾತಂತ್ರ್ಯ ನಂತರ ದೇಶವನ್ನು ಸದೃಢವಾನ್ನಾಗಿಸಿದ ಕಾಂಗ್ರೆಸ್ ಸರ್ಕಾರದ ಕಾರ್ಯಗಳ ಕುರಿತು,ಯುವಜನತೆ ಮನೆಯಲ್ಲಿನ ಹಿರಿಯರಿಂದತಿಳಿದುಕೊಳ್ಳಬೇಕಿದೆ. ಬಿಜೆಪಿ ಜನೋತ್ಸವಕಾರ್ಯಕ್ರಮ ಯಾವುದೇ ಸಾಧನೆ ಇಲ್ಲದಉತ್ಸವವಾಗಿದೆ. ಸರ್ಕಾರ ಅಧಿಕಾರ ಬಂದ ನಂತರ ರಾಜ್ಯಕ್ಕಾಗಲಿ, ದೊಡ್ಡಬಳ್ಳಾಪುರ ತಾಲೂಕಿಗಾಗಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಬೆಲೆಏರಿಕೆಯೇ ಬಿಜೆಪಿ ಸಾಧನೆಯಾಗಿದ್ದು, ಸಾಧನೆಯ ಅರ್ಥವನ್ನು ಬಿಜೆಪಿ ಮುಖಂಡರಿಗೆತಾಲೂಕಿನ ಜನತೆ ಕೇಳಬೇಕಿದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.