Advertisement

ರಾಹುಲ್ ಸಂವಾದ; ಎಚ್ ಎಎಲ್ ಸಾಮರ್ಥ್ಯ ಬಿಚ್ಚಿಟ್ಟ ನಿವೃತ್ತ ನೌಕರರು

06:39 PM Oct 13, 2018 | Team Udayavani |

ಬೆಂಗಳೂರು:ಭವಿಷ್ಯದಲ್ಲಿ ಅಮೆರಿಕಕ್ಕೆ ಸಡ್ಡು ಹೊಡೆಯುವ ಶಕ್ತಿ ಎಚ್ ಎಎಲ್ ನಲ್ಲಿದೆ. ಕೇಂದ್ರ ಸರ್ಕಾರದ ನಡೆ ಆಶ್ಚರ್ಯ ತಂದಿಲ್ಲ, ಅಪಮಾನವಾಗಿದೆ. ರಫೇಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಎಚ್ ಎಎಲ್ ಸಂಸ್ಥೆಗೆ ಇದೆ ಎಂದು ಎಚ್ ಎಎಲ್ ನಿವೃತ್ತ ನೌಕರ ಸಿರಾಜುದ್ದೀನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Advertisement

ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ನಗರದ ಮಿನ್ಸ್ಕ್ ಸ್ಕ್ವೇರ್ ಬಳಿ ಎಚ್ ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಮಾತನಾಡಿದ ಅವರು, ದೇಶಕ್ಕೆ ಎಚ್ ಎಎಲ್ ಬಹುದೊಡ್ಡ ಕೊಡುಗೆ ಎಂದು ಶ್ಲಾಘಿಸಿದ್ದರು.

ಬಳಿಕ ಎಚ್ ಎಎಲ್ ನಿವೃತ್ತ ನೌಕರರು ತಮ್ಮ ಅನುಭವಗಳನ್ನು ಸಂವಾದದಲ್ಲಿ ಹೇಳಿಕೊಂಡಿದ್ದರು. ಎಚ್ ಎಎಲ್  ನಿರ್ಮಿಸಿದ ವಿಮಾನಗಳಿಂದ ಭಾರತ 2 ಯುದ್ಧಗಳನ್ನು ಗೆದ್ದಿದೆ. 75 ವರ್ಷಗಳ ಅನುಭವದ ಎಚ್ ಎಎಲ್ ಅನ್ನು ರಫೇಲ್ ಡೀಲ್ ನಿಂದ ಕಿತ್ತೆಸೆದಿದೆ ಎಂದು ಸಿರಾಜುದ್ದೀನ್ ಅಸಮಾಧಾನ ವ್ಯಕ್ತಪಡಿಸಿದ್ದರು.

ನಾವು ಎಚ್ ಎಎಲ್ ಆಡಳಿತ ಮಂಡಳಿ ವಿರುದ್ಧವಿಲ್ಲ, ಕೇಂದ್ರ ಸರ್ಕಾರದ ವಿರುದ್ಧ ಇದ್ದೇವೆ. ಎಚ್ ಎಎಲ್ ನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ಇಲ್ಲ. ಭ್ರಷ್ಟಾಚಾರ, ಅಕ್ರಮದ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ನಿವೃತ್ತ ನೌಕರರಾದ ಮಹಾದೇವನ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next