ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ತನ್ನ ವಾಕ್ ಸಮರವನ್ನು ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು “ಮಧ್ಯಪ್ರದೇಶದ ಕೊಲಾರಸ್ ಮತ್ತು ಮುಂಗೋಲಿ ವಿಧಾನಸಭಾ ಉಪಚುನಾವಣೆಯಲ್ಲಿನ ಕಾಂಗ್ರೆಸ್ ವಿಜಯವು ರಾಜ್ಯ ಮತ್ತು ಕೇಂದ್ರದಲ್ಲಿನ BJP ದುರಾಡಳಿತೆಗೆ ಆಗಿರುವ ಸೋಲಾಗಿದೆ’ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸಾಧಿಸಿರುವ ವಿಜಯಕ್ಕಾಗಿ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ರಾಜ್ಯದ ಮತದಾರರನ್ನು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.
ರಾಜ್ಯದಲ್ಲಿನ ಆಳುವ ಬಿಜೆಪಿಗೆ ಈ ಉಪಚುನವಾಣೆಗಳು ಅತ್ಯಂತ ಪ್ರತಿಷ್ಠೆಯ ವಿಷಯವಾಗಿದ್ದವು. ಅಂತೆಯೇ ಕಾಂಗ್ರೆಸ್ ವಿರುದ್ಧ ಬಿಜೆಪಿ ಅತ್ಯಂತ ಬಿಗಿ ಹೋರಾಟವನ್ನು ಸಾದರಪಡಿಸಿತ್ತು. ಆದರೂ ಮತಾದರರು ಕಾಂಗ್ರೆಸ್‌ಗೆà ಒಲಿದು ವಿಜಯ ಹಾರವನ್ನು ತೊಡಿಸಿದರು.
ವಿಶೇಷವೆಂದರೆ ಕಾಂಗ್ರೆಸ್ ಪಾಲಿಗೆ ಇದು ನಿರಂತರ ನಾಲ್ಕನೇ ಗೆಲವಾಗಿದೆ. 2017ರಲ್ಲಿ ಕಾಂಗ್ರೆಸ್ ಅತೇರ್ ಮತ್ತು ಖಜುರಾಹೋ ಕ್ಷೇತ್ರಗಳನ್ನು ಗೆದ್ದಿತ್ತು.
ಕೊಲಾರಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ಯಾದವ್ ಅವರು ಮಾಜಿ ಶಾಸಕ,ಬಿಜೆಪಿ ಅಭ್ಯರ್ಥಿ ದೇವೇಂದ್ರ ಜೈನ್ ಅವರನ್ನು 8,083 ಮತಗಳಿಂದ ಸೋಲಿಸಿದ್ದರು.
ಮುಂಗೋಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೃಜೇಂದ್ರ ಸಿಂಗ್ ಯಾದವ್ ಅವರು ಬಿಜೆಪಿ ಅಭ್ಯರ್ಥಿ ಬಾಯ್‌ಸಾಹಬ್ ಯಾದವ್ ಅವರನ್ನು 2,124 ಮತಗಳಿಂದ ಸೋಲಿಸಿದ್ದರು.