ಯಳಂದೂರು: ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ನಾವು ಕಾಂಗ್ರೆಸ್ ಪಕ್ಷದ ಪರ ಇರುವ ಅಭ್ಯರ್ಥಿಗಳನ್ನು ಗೆಲ್ಲಿಸುವ ಜರೂರತ್ತು ಇದೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದಕಾಂಗ್ರೆಸ್‌ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ. ಇದನ್ನು ಇನ್ನಷ್ಟು ಉತ್ತಮಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಂಡಗಳನ್ನು ರಚಿಸಿಕೊಂಡು ಸೇವಾ ಮನೋ ಭಾವನೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡ ಬೇಕಿದೆ ಎಂದು ಸಲಹೆ ನೀಡಿದರು.
ಮುಂದೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಚುನಾವಣೆಗಳಿದ್ದು,ಇದಕ್ಕೆಪಕ್ಷದ ಟಿಕೆಟ್ ಪಡೆಯುವ ಆಕಾಂಕ್ಷಿಗಳು ಇದರಲ್ಲಿ ತಮ್ಮ ಚಾಣಕ್ಷತನ ಪ್ರದರ್ಶಿಸಿ ಪಕ್ಷದ ಪರವಾಗಿರುವ ವ್ಯಕ್ತಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಜನಪರವಾದ ಒಂದೇ ಒಂದು ಯೋಜನೆಯೂ ಇಲ್ಲ. ಇತ್ತ ರಾಜ್ಯ ಸರ್ಕಾರವೂ ಗುಂಪುಗಾರಿಕೆಯಲ್ಲಿ ತೊಡಗಿದ್ದು ಅಭಿವೃದ್ಧಿ ನಗಣ್ಯವಾಗಿದೆ. ಬಿಜೆಪಿ ಸರ್ಕಾರದ ವೈಫಲ್ಯ ಗಳನ್ನು ಜನತೆಗೆ ತಿಳಿಸಬೇಕು ಎಂದರು.ಮಾಜಿಶಾಸಕಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈ ಭಾಗದ ಶಾಸಕ ಎನ್. ಮಹೇಶ್ ಈಗಾಗಲೇ ಒಂದುಕಾಲನ್ನು ಬಿಜೆಪಿ ಪಕ್ಷಕ್ಕೆ ಇಟ್ಟಿದ್ದಾ ಗಿದೆ. ಜನರು ಇವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಹುಸಿ ಮಾಡಿದ್ದಾರೆ. ಕ್ಷೇತ್ರದಅಭಿವೃದ್ಧಿಯಲ್ಲಿಇವರ ಕೊಡುಗೆ ಶೂನ್ಯವಾಗಿದೆ. ಚುನಾವಣೆಯಲ್ಲಿ ಹೇಳಿದ್ದ ಕೆಲಸ ಗಳಿಂದ ಅವರು ದೂರವಿದ್ದಾರೆ. ಈ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಪರವಾಗಿರುವ ಅಭ್ಯರ್ಥಿಗಳನ್ನು ಕಾರ್ಯಕರ್ತರು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿಶಾಸಕರಾದ ಎಸ್.ಜಯಣ್ಣ, ಎಸ್. ಬಾಲರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿ ಸ್ವಾಮಿ, ಜಿಪಂ ಸದಸ್ಯ ಕೆ.ಪಿ. ಸದಾಶಿವ ಮೂರ್ತಿ, ವಡಗೆರೆದಾಸ್, ಮಧುವನಹಳ್ಳಿ ಶಿವಕುಮಾರ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ತೋಟೇಶ್, ನಾಗರಾಜು, ತಾಪಂ ಅಧ್ಯಕ್ಷ ಸಿದ್ದ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ವೆಂಕಟೇಶ್, ನಿರಂಜನ್, ಪಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ವೈ.ಜಿ. ರಂಗನಾಥ, ಮಹಾದೇವ ನಾಯಕ, ಉಮ್ಮತ್ತೂರು ಭಾಗ್ಯ ಇತರರಿದ್ದರು.