Advertisement

Jai Hind TV: ಕಾಂಗ್ರೆಸ್‌ ಪಕ್ಷ ಆಯ್ತು, ಈಗ ಚಾನೆಲ್‌ ಖಾತೆಯೂ ನಿಷ್ಕ್ರಿಯ!

09:44 PM Feb 17, 2024 | Team Udayavani |

ತಿರುವನಂತಪುರ: ಕೇರಳದಲ್ಲಿ ಕಾಂಗ್ರೆಸ್‌ ಬೆಂಬಲಿತ ಜೈಹಿಂದ್‌ ಟಿವಿಯ ಬ್ಯಾಂಕ್‌ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ನಿಷ್ಕ್ರಿಯಗೊಳಿಸಿದೆ ಎಂದು ಚಾನೆಲ್‌ನ ವ್ಯವಸ್ಥಾಪನಾ ಮಂಡಳಿ ಶನಿವಾರ ತಿಳಿಸಿದೆ.

Advertisement

ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಶುಕ್ರವಾರ ಆದಾಯ ತೆರಿಗೆ ಇಲಾಖೆಯು ಕೆಲ ಹೊತ್ತು ನಿಷ್ಕ್ರಿಯಗೊಳಿಸಿ, ಬಳಿಕ ಪುನಃ ತೆರವುಗೊಳಿಸಿ, ಖಾತೆಗಳನ್ನು ಸಕ್ರಿಯಗೊಳಿಸಿದ ಪ್ರಕರಣದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜೈಹಿಂದ್‌ ಟಿವಿ ಚಾನೆಲ್‌ನಲ್ಲಿ ಹೂಡಿಕೆ ಮಾಡಿರುವ ಕುರಿತು ವಿವರ ನೀಡುವಂತೆ ಸೂಚಿಸಿ ಇತ್ತೀಚಿಗೆ ಜೈಹಿಂದ್‌ ಟಿವಿ ಮಾಲೀಕತ್ವ ಹೊಂದಿರುವ ಭಾರತ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿಗೆ ಸಿಬಿಐ ನೋಟಿಸ್‌ ಹೊರಡಿಸಿತ್ತು. ಇದರ ಮುಂದುವರಿದ ಭಾಗವಾಗಿ ಕೇಂದ್ರ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಇಲಾಖೆಯು ಎರಡು ಪ್ರಮುಖ ಖಾಸಗಿ ಬ್ಯಾಂಕ್‌ಗಳಿಗೆ ನೋಟಿಸ್‌ ಜಾರಿ ಮಾಡಿದ್ದು, ಸರ್ಕಾರಕ್ಕೆ ಬರಬೇಕಿರುವ ಹಣವನ್ನು ಸುದ್ದಿ ವಾಹಿನಿಯಿಂದ ವಸೂಲಿ ಮಾಡುವಂತೆ ಸೂಚಿಸಿದೆ. ಇದರ ಭಾಗವಾಗಿ ಬ್ಯಾಂಕ್‌ ಖಾತೆ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next