Advertisement

ಮುಂದುವರಿದ ಕಾಂಗ್ರೆಸ್ ನಾಯಕರ ಧರಣಿ : ಕಲಾಪ ನಾಳೆಗೆ ಮುಂದೂಡಿಕೆ

04:25 PM Feb 17, 2022 | Team Udayavani |

ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಶಾಸಕರು ಯಾವುದೇ ಕಾರಣಕ್ಕೂ ಜಗ್ಗದ ಹಿನ್ನಲೆಯಲ್ಲಿ ಗುರುವಾರ ವಿಧಾನಸಭಾ ಕಲಾಪವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.

Advertisement

ಭೋಜನ ವಿರಾಮನದ ನಂತದ ಕಲಾಪ ಆರಂಭವಾದಾಗ ಕಾಂಗ್ರೆಸ್ ನಾಯಕರು ಧರಣಿ ಮುಂದುವರಿಸಿದರು. ಪ್ರತಿಭಟನೆ ಕೈ ಬಿಡುವಂತೆ ಸ್ಪೀಕರ್ ಕಾಗೇರಿ ಮನವಿ ಮಾಡಿ ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಹೋರಾಟ ಮಾಡಬಾರದು. ಕಲಾಪದಲ್ಲಿ ಎಲ್ಲರೂ ಭಾಗವಹಿಸಬೇಕು. ಅಭಿಪ್ರಾಯ ಬೇಧ ಇದ್ರೆ ಹೊರಗಡೆ ಪ್ರತಿಭಟನೆ ಮಾಡಿ ಎಂದು ಹತ್ತು ನಿಮಿಷ ಸದನ ಮುಂದೂಡಿದರು. ಕಾನೂನು ಸಚಿವ ಮಾಧುಸ್ವಾಮಿ ಅವರು ಸಭೆ ಕರೆಯಿರಿ ಎಂದು ಮನವಿ ಮಾಡಿದರು.ಪ್ರತಿಭಟನೆ ಮುಂದುವರಿದ ಹಿನ್ನಲೆಯಲ್ಲಿ ಕಲಾಪ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ : ಅಹೋರಾತ್ರಿ ಧರಣಿ: ಸದನಕ್ಕೆ ಹಾಸಿಗೆ, ದಿಂಬು ತರಲು ಕಾಂಗ್ರೆಸ್ ಸಿದ್ಧತೆ

ಸದನದಲ್ಲಿಯೇ ಅಹೊರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ನಾಯಕರ ತೀರ್ಮಾನಿಸಿ ಸದನದ ಒಳಗೆ ಕುಳಿತಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಧರಣಿ ನಿರತ ಕಾಂಗ್ರೆಸ್ ನಾಯಕರ ಮನವೊಲಿಸುವ ಪ್ರಯತ್ನ ನಡೆಸಿದರು. ಅಹೊರಾತ್ರಿ ಧರಣಿ ಕೈ ಬಿಡುವಂತೆ ಮನವಿ ಮಾಡಿದರಾದರೂ ಹಿಂಪಡೆಯಲು.ಕಾಂಗ್ರೆಸ್ ಜನ ಪ್ರತಿನಿಧಿಗಳು ನಿರಾಕರರಿಸಿದರು.

Advertisement

ಧರಣಿ ನಿರತ ಕಾಂಗ್ರೆಸ್ ಸದಸ್ಯರಿಗೆ ವೆಜ್ ಊಟ,ಕಾಫಿ, ಚಹಾ, ಕೊಡಲು ಮತ್ತು ಹಾಸಿಗೆ ದಿಂಬು ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸ್ಪೀಕರ್ ಸೂಚನೆ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next