Advertisement

ಮೂಲ ಕಾಂಗ್ರೆಸ್ಸಿಗರ ಕಡೆಗಣನೆ: ಶಾಸಕರ ವಿರುದ್ಧ ಆಕ್ರೋಶ

03:41 PM Dec 10, 2022 | Team Udayavani |

ಹೊಸಕೋಟೆ: ತಾಲೂಕಿನ ಮೂಲ ಕಾಂಗ್ರೆಸ್‌ ಕಾರ್ಯ ಕರ್ತರನ್ನು ಸ್ವಾಭಿಮಾನಿ ಪಕ್ಷದಿಂದ ಬಾಹ್ಯ ಬೆಂಬಲ ನೀಡಿ ಕಾಂಗ್ರೆಸ್‌ ಸದಸ್ಯರಾಗಿ ಗುರು ತಿ ಸಿಕೊಂಡಿರುವ ಶಾಸಕ ಶರತ್‌ ಬಚ್ಚೇಗೌಡರ ವಿರುದ್ಧ ಹಳೆಯ ಕಾಂಗ್ರೆಸ್‌ ಕಾರ್ಯ ಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಹಲವಾರು ಮೂಲ ಕಾಂಗ್ರೆಸ್‌ ಕಾರ್ಯಕರ್ತರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚೀಮಂಡಹಳ್ಳಿ ಮುನಿಶಾಮಣ್ಣ ಮಾತನಾಡಿ, ನಮ್ಮ ಕಾರ್ಯಕರ್ತರಿಂದ ಸಣ್ಣ ಪುಟ್ಟ ದೂರು ಬಂದಿದ್ದು ಎಲ್ಲವನ್ನು ಆಲಿಸಿದ್ದೇವೆ. ಮುಂದೂಂದು ದಿನ ತಾಲೂಕಿನ ಎಲ್ಲಾ ಕಾರ್ಯಕರ್ತರನ್ನು ಸೇರಿಸಿ ಸಭೆಯನ್ನು ಹಮ್ಮಿಕೊಂಡು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ನಾವು ಶಾಸಕರ ಸಮ್ಮುಖದಲ್ಲಿ ಕೆಪಿಸಿಸಿಯಲ್ಲಿ ಸಭೆ ಮಾಡಿ ಕುಳಿತು ಮೂರು ಜನರನ್ನು ಸೇರಿಸಿ ಮೂಲ ಮತ್ತು ಶಾಸಕರ ಒಬ್ಬರಿಗೆ ಫೋಸ್ಟ್‌ ನೀಡುವಂತೆ ಕೊಟ್ಟಿದ್ದು, ಅದನ್ನು ಮರೆಮಾಚಿ ಬೇರೆ ಪಟ್ಟಿ ಬಂದಿದೆ. ಈಗಾಗಲೇ ರಾಜ್ಯದ ವರಿಷ್ಠರಿಗೆ ದೂರನ್ನು ನೀಡಿದ್ದೇವೆ. ಕೆಪಿಸಿಸಿಯಲ್ಲಿ ಕಾಣದ ಇನ್ನೂಂದು ತಂಡ ಇದೆ ನಮಗೂ ತಿಳಿಸದೆ ನಮ್ಮ ತಾಲೂಕಿನ ಸಮಿತಿಯನ್ನು ಬದಲಾವಣೆ ಮಾಡಿದ್ದಾರೆ ಎಂದರು.

ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದೆ: ನಾನು ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಪ್ರಸಾದ್‌ ಸಹ ಅರ್ಜಿ ಸಲ್ಲಿಸಿದ್ದಾರೆ. ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ನಾವು ಪಕ್ಷಕ್ಕೆ ದುಡಿಯುತ್ತೇವೆ. ನಾವು ನಿಷ್ಠಾವಂತ ಕಾಂಗ್ರೆಸ್ಸಿಗರು. ನಮ್ಮಲ್ಲಿ ಸಣ್ಣ ಭಿನ್ನಾಭಿಪ್ರಾಯಗಳಿದ್ದು, ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಶಾಸಕರ ಜೊತೆ ಇರುವವರು ನಮ್ಮ ಜೊತೆ ಹೊಂದಿಕೊಂಡು ಹೋಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ: ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್‌ ಮಾತನಾಡಿ, ನಮ್ಮಲ್ಲಿ ಭಿನ್ನಾಭಿಪ್ರಾಯಗಳಿ ರುವುದು ನಿಜ. ಮುಂದಿನ ದಿನಗಳಲ್ಲಿ ಗೊಂದಲಗಳನ್ನು ಸರಿಪಡಿಸುವ ಆಶ್ವಾಸನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭರವಸೆ ನೀಡಿದ್ದಾರೆ. 23ರ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದು, ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಶಾಸಕರು ಇದನ್ನು ಅರಿತುಕೊಳ್ಳ ಬೇಕು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೇಮಂತ್‌ ಕುಮಾರ್‌, ಡಾ. ಸಗೀರ್‌ ಅಹಮದ್‌, ಎಚ್‌.ಜೆ ಬಚ್ಚೇಗೌಡ, ಎಂ.ಎ ಕೃಷ್ಣಾರೆಡ್ಡಿ, ಕೃಷ್ಣಮೂರ್ತಿ, ಕಲ್ಲಪ್ಪ, ಹರೀಶ್‌ ಚಕ್ರವರ್ತಿ, ಹೇಮಲತಾ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next