Advertisement
ಬಿಸಿಲಿನ ತಾಪವನ್ನು ಲೆಕ್ಕಿಸದ ಜನನಗರದಲ್ಲಿ ತಾಪಮಾನ 33 ಡಿಗ್ರಿ ತಲುಪಿದ್ದು, ಇವುಗಳನ್ನೆಲ್ಲ ಲೆಕ್ಕಿಸದೆ ಜನ ಸಮಾವೇಶದಲ್ಲಿ ಭಾಗವಹಿಸಿದರು. ಕಲ್ಸಂಕ ಗಾರ್ಡನ್ ಹಾಗೂ ರಸ್ತೆ ಬದಿಗಳಲ್ಲಿ ಸಾಲುಗಟ್ಟಿ ವಾಹನಗಳ ನಿಲುಗಡೆಯಾಗಿತ್ತು. ಬಸ್ಸು, ಕಾರು, ಬೈಕ್‌ಗಳಲ್ಲಿ ಸಹಸ್ರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಿದರು.
ಬಹುತೇಕ ಜನರು ತಂಪು ಪಾನೀಯಗಳಿಗೆ ಮೊರೆ ಹೋದರು. ಹೋಟೆಲ್‌ಗಳು, ತಂಪುಪಾನಿಯದ ಅಂಗಡಡಿಗಳು ಜನರಿಂದ ತುಂಬಿದ್ದವು. ಸಮಾವೇಶದಲ್ಲಿ ಸೇರಿದ ಕಾರ್ಯಕರ್ತರಿಗೆ ಮಜ್ಜಿಗೆಯನ್ನೂ ವಿತರಿಸಲಾಯಿತು. ರವಿವಾರ ಆದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಹುಲ್ ಕೀ ಜೈ ಘೋಷ
ಸುಮಾರು 50ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬೈಕ್‌ನಲ್ಲಿ ರಾಹುಲ್ ಕೀ ಜೈ ಘೋಷ ವಾಕ್ಯ ಕೂಗುತ್ತಾ ಸಮಾವೇಶಕ್ಕೆ ಆಗಮಿಸಿದರು. ನಾಯಕರ ಫ್ಲೆಕ್ಸ್‌ಗಳು ನಗರದಾದ್ಯಂತ ರಾರಾಜಿಸಿದವು.
Related Articles
ಸಮಾವೇಶದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಕಲ್ಸಂಕ ಸಹಿತ ಕಿನ್ನಿಮೂಲ್ಕಿ, ಶಿರಿಬೀಡು, ಕರಾವಳಿ ಜಂಕ್ಷನ್, ಕಡಿಯಾಳಿ ಸುತ್ತಮುತ್ತ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
Advertisement