Advertisement
ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಪಕ್ಷ ನಾಯಕ ಅಶೋಕ ವಿರುದ್ಧ ಹರಿಹಾಯ್ದಿದ್ದಾರೆ.ವಿಪಕ್ಷ ನಾಯಕರಾಗಿ ಆರ್.ಅಶೋಕ ಅವರಿಗೆ ದೊಡ್ಡ ಜವಾಬ್ದಾರಿ ಇದೆ. ಸರಕಾರಕ್ಕೆ ಸಲಹೆ ಕೊಟ್ಟು ಎಚ್ಚರಿಸಲಿ. ಸರಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು ಸಹಜ. ಆದರೆ ಅವರು ಸರಕಾರವನ್ನು ಬೀಳಿಸುವ ಮಾತನಾಡಿದ್ದಾರೆ. ಜನ ಕೊಟ್ಟಿರುವ ಅಧಿಕಾರವನ್ನು ಕಸಿದುಕೊಳ್ಳಲು ಇವರ್ಯಾರು ಎಂದು ಸಚಿವ ಪರಮೇಶ್ವರ್ ಪ್ರಶ್ನಿಸಿದರು.
ದ್ದಾರೆ. ನಮ್ಮ ಸರಕಾರವನ್ನು ಕಿತ್ತೆಸೆಯುವ ಮಾತು ಬದಿಗಿರಲಿ. ಮೊದಲು ಅವರನ್ನು ಜೋಡಿಸಿಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು. ಗೋ ಬ್ಯಾಕ್ ಅಶೋಕ ಪೋಸ್ಟರ್ ಬಂದರೂ ಅಚ್ಚರಿಯಿಲ್ಲ: ಖರ್ಗೆ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆಯಿಂದ ಬಿಜೆಪಿ ವರ್ಸಸ್ ಬಿಜೆಪಿಯ 2ನೇ ಚಾಪ್ಟರ್ ಆರಂಭವಾಗಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅಶೋಕ ಅವರನ್ನು ಮಂಡ್ಯ ಉಸ್ತುವಾರಿಯನ್ನಾಗಿ ನೇಮಿಸಿದಾಗಲೂ ಅವರ ಪಕ್ಷದವರೇ ಗೋ ಬ್ಯಾಕ್ ಅಶೋಕ ಎಂಬ ಪೋಸ್ಟರ್ ಅಂಟಿಸಿದ್ದರು. ಬಿಜೆಪಿ ಕಚೇರಿಯಲ್ಲೂ ಗೋ ಬ್ಯಾಕ್ ಪೋಸ್ಟರ್ ಬಂದರೆ ಅಚ್ಚರಿಯಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಯ