ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಹೊಗಳಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಸಂಘಟನಾ ಚಟುವಟಿಕೆ, ತಂತ್ರಗಾರಿಕೆಯಲ್ಲಿ ಬಿಜೆಪಿ – ಆರೆಸ್ಸೆಸ್ ಜತೆ ಸರಿಸಾಟಿಯಾಗದು ಎಂದು ಮತ್ತೂಂದು ಅಚ್ಚರಿಗೂ ಕಾರಣವಾಗಿದ್ದಾರೆ. ಉ.ಪ್ರ. ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ತನ್ನ ಸಂಘಟನಾ ಶಕ್ತಿಯನ್ನು ಬೆಳೆಸಿಕೊಳ್ಳುವಲ್ಲಿ ಹಿನ್ನಡೆ ಕಾಣುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮತ ಬ್ಯಾಂಕ್ ಸೆಳೆಯುವಲ್ಲಿ ಬಲಿಷ್ಠವಾಗಿದೆ ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಏನೇ ಮಾಡಿದರೂ ಬಂಗಾಲದಲ್ಲಿ ಟಿಎಂಸಿ ಮತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ ಬ್ಯಾಂಕ್ ಸೆಳೆಯುವಲ್ಲಿ ಸಫಲವಾಗಿಲ್ಲ ಎಂದಿದ್ದಾರೆ. ನೋಟು ಅಮಾನ್ಯ ಮಾಡಿದ ಕ್ರಮವನ್ನು ಬೆಂಬಲಿಸಿ ಯುಪಿ ಮತದಾರರು ಬಿಜೆಪಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ ಇದಕ್ಕಾಗಿ ಬಿಜೆಪಿ ಪ್ರಚಂಡ ಬಹುಮತ ಗಳಿಸಿತು ಎನ್ನುವ ವಾದವೂ ಸರಿಯಲ್ಲ ಎಂದಿದ್ದಾರೆ.