ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ ರಾಜ್ಯ ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಕಾರ್ಮಿಕ ಮುಖಂಡರ ಜತೆಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವರಾದರಾಮಲಿಂಗಾರೆಡ್ಡಿ ಹಾಗೂ ಎಚ್.ಎಂ.ರೇವಣ್ಣ , ಮುಖ್ಯಮಂತ್ರಿಯವರು ಮನಸ್ಸುಮಾಡಿದರೆ ಒಂದು ದಿನದಲ್ಲಿ ತೀರ್ಮಾನ ಮಾಡಬಹುದು ಎಂದು ಹೇಳಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಒಮ್ಮೆ ಮುಷ್ಕರ ಕರೆ ಕೊಟ್ಟಾಗ ಮಾತುಕತೆ ಮೂಲಕಬೇಡಿಕೆ ಈಡೇರಿಸಿದ್ದೆವು. ಶೇ.15 ವೇತನಪರಿಷ್ಕರಣೆ ಮಾಡಿ ತಕ್ಷಣವೇ ಸಾರ್ವಜನಿಕರಿಗೆಉಂಟಾಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿದರು.
ವೇತನ ಶೇ.15 ಕ್ಕಿಂತ ಹೆಚ್ಚು ಪರಿಷ್ಕರಣೆ ಆಗಬೇಕು ಎಂದು ನಮ್ಮ ಸರ್ಕಾರ ಇದ್ದಾಗಲೇಬೇಡಿಕೆ ಇಟ್ಟಿದ್ದರು. 2020 ರಲ್ಲಿ ವೇತನ ಪರಿಷ್ಕರಣೆಆಗಬೇಕಿತ್ತು. ಆಗಿಲ್ಲ, 1.20 ಲಕ್ಷ ನೌಕರರಿದ್ದುಅವರ ಭವಿಷ್ಯವನ್ನೂ ನೋಡಬೇಕು ಎಂದರು.ನಾಲ್ಕೂ ನಿಗಮಗಳ ಪೈಕಿ ಶೇ.40 ಬಸ್ಸುಗಳುನಷ್ಟದಲ್ಲಿ ಓಡಿಸಲಾಗುತ್ತಿದೆ. ಶೇ.20 ಬಸ್ಸುಗಳುಲಾಂಗ್ ರೂಟ್‌ನಲ್ಲಿ ಲಾಭ ತಂದುಕೊಡುತ್ತಿವೆ. ನೌಕರ ಒಕ್ಕೂಟದವರೂ ಈ ಸಮಯದಲ್ಲಿ ಹಠ ಮಾಡಬಾರದು ಎಂದರು.
ಸಮಸ್ಯೆ ಮಾತುಕತೆ ಮೂಲಕ ಇತ್ಯರ್ಥಮಾಡಬೇಕು. ಖಾಸಗಿ ಬಸ್ಸುಗಳ ಮೂಲಕಎಷ್ಟು ದಿನ ಸಾಧ್ಯವಾಗುತ್ತದೆ. ಎಫ್‌ಸಿಇಲ್ಲದಿದ್ದರೂ , ರಸ್ತೆ ತೆರಿಗೆ ಪಾವತಿಸದಿದ್ದರೂಬಸ್ ಓಡಿಸಲು ಅವಕಾಶ ಕೊಟ್ಟಿದ್ದಾರೆ.ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಸರ್ಕಾರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿವಿಫಲವಾಗಿದೆ. ಮೊದಲಲ್ಲೇ ಎಚ್ಚರಿಕೆ ವಹಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಅನುಭವ ಇಲ್ಲದಸಾರಿಗೆ ಸಚಿವ, ಹಠಮಾರಿಮುಖ್ಯಮಂತ್ರಿಯವರಿಂದ ಇಂತಹ ಸ್ಥಿತಿಎದುರಾಗಿದೆ. ಬೆದರಿಕೆ ಮಾರ್ಗ ಬಿಟ್ಟು ಸಂಧಾನ ಮಾರ್ಗ ಹಿಡಿಯಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿದೆ. ಲಾಕ್‌ಡೌನ್ ತಜ್ಞರ ಅಭಿಪ್ರಾಯದಮೇಲೆ ನಿರ್ಧಾರ ಮಾಡ ಬೇಕು.ಹಗಲೆಲ್ಲ ಕೊರೊನಾ ಮಲಗಿರುತ್ತೆ, ರಾತ್ರಿ ಎಲ್ಲ ಕೋವಿಡ್ ಆ್ಯಕ್ಟಿವ್‌ಆಗಿರುತ್ತಾ? ಬೇರೆ ಜಿಲ್ಲೆಗಳಲ್ಲಿ ಕರ್ಫ್ಯೂ ಯಾಕಿಲ್ಲ. ಕೋವಿಡ್ಎದುರಿಸಲು ಇವರು ಸರಿಯಾಗಿಸಿದ್ಧತೆಯೇ ಮಾಡಿ ಕೊಂಡಿಲ್ಲ. ನೆಪಕ್ಕೆ ರಾತ್ರಿ ಕರ್ಫ್ಯೂ ಮಾಡಿದರೆ ಪ್ರಯೋಜನವಿಲ್ಲ.
-ಎಚ್.ಎಂ.ರೇವಣ್ಣ, ಮಾಜಿ ಸಚಿವ