Advertisement

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

05:04 PM Jan 03, 2025 | Team Udayavani |

ಕಲಬುರಗಿ: ಸಿಎಂ ಸಿದ್ದರಾಮಯ್ಯಹಾಗೂ ಸಚಿವರಾದ ಮಹಾದೇವಪ್ಪ, ರಾಜಣ್ಣ, ಸತೀಶ್ ಜಾರಕಿಹೊಳಿ ಎಲ್ಲರೂ ಹಳೇ ಸ್ನೇಹಿತರು. ಹೀಗಾಗಿ ಸೌಹಾರ್ದಯುತವಾಗಿ ಒಂದು ಕಡೆ ಸೇರಿ ಡಿನ್ನರ್ ಮಾಡಿದ್ದಾರೆ. ಅದರಲ್ಲಿ ಏನು ವಿಶೇಷ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಶುಕ್ರವಾರ (ಜ.03) ಮಾತನಾಡಿದ ಅವರು, ಡಿನ್ನರ್ ಮಾಡಿದ್ದಕ್ಕೆ ವಿಶೇಷ ಅರ್ಥ ಬೇಡ ಎಂದರು. ಸಂಪುಟ ಪುನಾರಚನೆ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಅದರಲ್ಲೂ ಸಿಎಂಗೆ ಪರಮಾಧಿಕಾರವಿದೆ. ಸಚಿವರ ಕುರಿತಾಗಿ ಯಾವುದೇ ರಿಪೋರ್ಟು ಕೇಳಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಬಿಜೆಪಿಯವರು ಯಾವ ಆಧಾರದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಾರೆ? ಖುದ್ದು ಖರ್ಗೆ ಅವರೇ ಏನಾದರೂ ದಾಖಲೆ ಕೊಡಿ ಎಂದಿದ್ದಾರೆ. ಈಶ್ವರಪ್ಪ ಕೇಸ್ ಬೇರೆ, ಇದು ಬೇರೆ ಎಂದರು.

ರಾಜ್ಯದಲ್ಲಿ ಬಸ್ ದರ ಏರಿಕೆ ಸಾಮಾನ್ಯವಾದದ್ದು. ಕಾಲ ಕಾಲಕ್ಕೆ ಡಿಸೇಲ್/ ಪೆಟ್ರೋಲ್ ದರ ಏರಿಕೆಯಾಗುತ್ತದೆ. ಹೀಗಾಗಿ ಬಸ್ ದರ ಏರಿಕೆ ಮಾಡಲಾಗಿದೆ ಎಂದು ಸಚಿವ ಭೈರತಿ ಸುರೇಶ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next