Advertisement

‘ಕಾಂಗ್ರೆಸ್‌ ಸರಕಾರ ಕಿತ್ತೂಗೆಯಲು ನವಕರ್ನಾಟಕ ಯಾತ್ರೆ ಮುನ್ನುಡಿ’

01:03 PM Oct 28, 2017 | Team Udayavani |

ಉಳ್ಳಾಲ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕುಂಠಿತಕ್ಕೆ ಕಾಂಗ್ರೆಸ್‌ ಸರಕಾರ ಕಾರಣವಾಗಿದ್ದು. ಈ ಸರಕಾರವನ್ನು ಕಿತ್ತೂಗೆದು, ಆ ಮೂಲಕ ನವ ಕರ್ನಾಟಕ ನಿರ್ಮಾಣಕ್ಕೆ ಮುನ್ನುಡಿಯಾಗಬೇಕು ಎಂದು ನವಕರ್ನಾಟಕ ಪರಿವರ್ತನಾ ಯಾತ್ರೆಯ ಜಿಲ್ಲಾ ಸಂಚಾಲಕ ಸತ್ಯಜಿತ್‌ ಸುರತ್ಕಲ್‌ ತಿಳಿಸಿದರು.

Advertisement

ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನ.2ರಂದು ಬೆಂಗಳೂರಿನ ನೆಲಮಂಗಲದಿಂದ ಹೊರಡಲಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಯ ಕುರಿತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ವಿಶೇಷ ಸಭೆ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 75 ದಿನಗಳ ಕಾಲ ಸಂಚರಿಸಲಿರುವ ಈ ಯಾತ್ರೆಯು ರಾಜ್ಯದ ಅತೀ ದೊಡ್ಡ ಯಾತ್ರೆಯಾಗಲಿದೆ. ಕ್ಷೇತ್ರ ವ್ಯಾಪ್ತಿ ಯಾತ್ರೆ ಯಶಸ್ವಿಗೊಳಿಸುವ ಬಗ್ಗೆ ಶಕ್ತಿಕೇಂದ್ರವಾರು ವಿಶೇಷ ಸಭೆ ನಡೆಸಲು ಸೂಚಿಸಿದರು.

ಕ್ಷೇತ್ರಾಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಮಾತನಾಡಿ, ಕ್ಷೇತ್ರದ 197 ಬೂತ್‌ನಿಂದ ತಲಾ
ಮೂವರಂತೆ ಸುಮಾರು 600 ಯುವ ಕಾರ್ಯಕರ್ತರು ಬೆಂಗಳೂರಿನಲ್ಲಿ ನಡೆಯುವ ಬೈಕ್‌ ರ‍್ಯಾಲಿಯಲ್ಲಿ
ಭಾಗವಹಿಸಲಿದ್ದಾರೆ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರ. ಕಾರ್ಯದರ್ಶಿಗಳಾದ ಮೋಹನ್‌ ರಾಜ್‌ ಕೆ.ಆರ್‌., ಮನೋಜ್‌ ಆಚಾರ್ಯ ಉಪಸ್ಥಿತರಿದ್ದರು.

Advertisement

ಕ್ಷೇತ್ರ, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮೋರ್ಚಾದ ಪ್ರಮುಖರು, ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಪ್ರಮುಖ
ಕಾರ್ಯಕರ್ತರು ಭಾಗವಹಿಸಿದ್ದರು.

ಮೋದಿ ಕಾರ್ಯಕ್ರಮಕ್ಕೆ 3000 ಕಾರ್ಯಕರ್ತರು
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಮಂಗಳೂರು
ವಿಧಾನಸಭಾ ಕ್ಷೇತ್ರದಿಂದ 3 ಸಾವಿರಕ್ಕೂ ಅಧಿಕ ಬಿ.ಜೆ.ಪಿ. ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಸಂತೋಷ್‌ ಕುಮಾರ್‌ ಕ್ಷೇತ್ರಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next