ಚಂಡೀಗಢ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಚಂಡೀಗಢದಲ್ಲಿರುವ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ದಾಖಲಾಗಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಾಲಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಖೈರಾ ಅವರ ಸೆಕ್ಟರ್ 5 ರ ನಿವಾಸದ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ.
ಬಂಧನಕ್ಕೆ ಪೊಲೀಸರು ಬರುತ್ತಿದ್ದಂತೆ ಖೈರಾ ಫೇಸ್ ಬುಕ್ ಲೈವ್ ಮಾಡಿದ್ದು ಅದರಲ್ಲಿ ಪೊಲೀಸರೊಂದಿಗೆ ವಾದ ಮಾಡುವ ಚಿತ್ರಣ ಕಾಣಬಹುದಾಗಿದೆ ಅಲ್ಲದೆ ವಿಡಿಯೋದಲ್ಲಿ ಖೈರಾ ಪೊಲೀಸರಲ್ಲಿ ಬಂಧಿಸಲು ಕಾರಣವನ್ನು ಕೇಳುವ ವಿಚಾರವೂ ಬಹಿರಂಗಗೊಂಡಿದ್ದು ಜೊತೆಗೆ ತನ್ನನ್ನು ಬಂಧಿಸಲು ಅರೆಸ್ಟ್ ವಾರಂಟ್ ಇದೆಯಾ ಎಂದು ಪ್ರಶ್ನೆ ಮಾಡುವುದು ಕೂಡಾ ಚಿತ್ರೀಕರಣವಾಗಿದೆ.
ತೀವ್ರ ವಾದ ಕುಟುಂಬದವರ ಪ್ರತಿರೋಧದ ನಡುವೆ ಖೈರಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತ ಖೈರಾ ಅವರನ್ನು ಬಂಧಿಸುತ್ತಿದ್ದಂತೆ ಬಂಧನವನ್ನು ಖಂಡಿಸಿ ಶಿರೋಮಣಿ ಅಕಾಲಿದಳ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದೆ.
ಇದನ್ನೂ ಓದಿ: Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ