ಬಂಗಾರಪೇಟೆ: ಡಿಡಿ ಕಾಂಗ್ರೆಸ್‌ನ ಹಾಲಿ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಹೆಗಲ ಮೇಲೆ ಶನಿಮಹಾತ್ಮದೇವರು ಕುಳಿತಿರುವುದರಿಂದ ಮುಂದಿನ ಚುನಾವಣೆಯಲ್ಲಿಸೋಲುವುದು ಖಚಿತವಾಗಿದ್ದು, ಶನಿಮಹಾತ್ಮ ದೇವರನ್ನು ಹೆಗಲ ಮೇಲಿಂದ ಇಳಿಸಿಕೊಳ್ಳಲು ದೇವಾಲಯಗಳು ಸುತ್ತಿದ್ದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ 4ನೇ ಹಂತದ 4.54 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಜನರು ಮತ ನೀಡಿ ಗೆಲ್ಲಿಸಿದರೆ ಸರ್ಕಾರದ ಗೋಮಾಳ, ಗುಂಡುತೋಪುಗಳನ್ನು ಕಬಳಿಕೆ ಮಾಡಿದರೆ ಹೇಗೆ, ಜನರ ಆಸ್ತಿ ದೋಚಿದರೆ ಸೋಲು ಖಚಿತ ಎಂದರು.
ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಶೇ. 40 ಕಮೀಷನ್ ಸರ್ಕಾರವೆಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿ ಗಳ ಮೇಲೆ ಗುತ್ತಿಗೆದಾರರಿಂದ ಎಷ್ಟೆಷ್ಟು ಕಮೀಷನ್ ಪಡೆಯುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದರು.
ಬಂಗಾರಪೇಟೆ ಪಟ್ಟಣದಲ್ಲಿ 30 ವರ್ಷಗಳ ಹಿಂದೆ ಇದ್ದ ಹಾಗೇಯೇ ಈಗಲೂ ರಸ್ತೆಗಳು ಇದ್ದು, ಅಭಿವೃದ್ಧಿ ಮರೀಚಿಕೆಯಾಗಿವೆ. 10 ವರ್ಷಗಳಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ನೀಡಿರುವ ಅನುದಾನಗಳಲ್ಲಿ ಕಳಪೆ ಕಾಮಗಾರಿಗಳನ್ನು ಹಣ ಲೂಟಿ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದರು. ಇದೇವ ವೇಳೆ ಸಂಸದ ಮುನಿ ಸ್ವಾಮಿ ಅವರು ಜಿಲ್ಲಾಧಿಕಾರಿ ಕರ್ತವ್ಯ ನೈಪುಣ್ಯತೆಯನ್ನು ಪ್ರಶಂಸಿಸಿದರು.
ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯಛಲವಾದಿ ನಾರಾ ಯಣಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣ ಸ್ವಾಮಿ, ಮಾವು ನಿಗಮದ ಅಧ್ಯಕ್ಷವಾಸುದೇವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಹೇಶ್,ತಾಲೂಕು ಅಧ್ಯಕ್ಷ ನಾಗೇಶ್, ವಿ.ಶೇಷು, ತಹಶೀಲ್ದಾರ್‌ಎಂ.ದಯಾನಂದ್, ತಾಪಂ ಇಓ ಎನ್.ವೆಂಕಟೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಜಿ.ಎನ್.ಚಲಪತಿ, ಸದಸ್ಯರಾದ ಕಪಾಲಿ ಶಂಕರ್, ಪ್ರಭಾಕರ್ ರಾವ್, ವೆನ್ನೆಲಾ, ದೇಶಿಹಳ್ಳಿಶ್ರೀನಿವಾಸ್, ಬಿಪಿ.ಮಹೇಶ್, ಬಿಂದು ಮಾಧವ್, ಶೋಭ,ಮುಖಂಡರಾದ ಬಿ.ಹೊಸ ರಾಯಪ್ಪ, ಎಂ;ಪಿ. ಶ್ರೀನಿವಾಸಗೌಡ, ಮಾರ್ಕಂಡೇಯಗೌಡ, ಹನುಮಪ್ಪ ಇತರರಿದ್ದರು
ಉಸ್ತುವಾರಿ ಸಚಿವರು, ಶಾಸಕರು ಗೈರು : ಪುರಸಭೆ ವ್ಯಾಪ್ತಿ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ನಗರೋತ್ಥಾನ ಯೋಜನಯಡಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಹಮ್ಮಿಕೊಂಡಿದ್ದ ಭೂಮಿ ಪೂಜೆ ಕಾರ್ಯಕ್ರಮವನ್ನು ಜ.23 ರಂದು ಸಮಯ ನಿಗದಿಪಡಿಸಲಾಗಿತ್ತು. ಈ ವೇಳೆ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮ ಇರುವುದರಿಂದ ಫೆ. 3ಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋರಿಕೆಯಂತೆ ಮುಂದೂಡಲಾಗಿತ್ತು. ಆದರೂ ಈ ಕಾರ್ಯಕ್ರಮಕ್ಕೆ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಗೈರಾಗಿದ್ದರು. ಪುರಸಭೆ ಅಧ್ಯಕ್ಷೆ ಫರ್ಜಾನ ಸುಹೇಲ್, ಉಪಾಧ್ಯಕ್ಷೆ ಶಾರದ ವಿವೇಕಾನಂದ್ ಸೇರಿದಂತೆ 22ಕ್ಕೂ ಹೆಚ್ಚು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರೂ ಯಾರೂ ಬಂದಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಈ ಕಾರ್ಯಕ್ರಮದ ಜವಾಬ್ದಾರಿ ಹೊಂದಿದ್ದರೂ ಗೈರಾಗಿದ್ದರು. ಉಸ್ತುವಾರಿ ಸಚಿವರು ಗೈರಾಗಿದ್ದು ಕೇವಲ ಪ್ರಚಾರಕ್ಕೆ ಮಾತ್ರ ಎನ್ನುವುದು ನಿಜವಾಗಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು.