Advertisement

ಹಿಂದೂ ರಾಷ್ಟ್ರ ನಿರ್ಮಾಣದ ಕರೆ ನೀಡಿದ ಕಾಂಗ್ರೆಸ್ ಶಾಸಕಿ

12:39 PM Jun 18, 2023 | Team Udayavani |

ಹೊಸದಿಲ್ಲಿ: ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಛತ್ತೀಸ್‌ ಗಢದ ಕಾಂಗ್ರೆಸ್ ನಾಯಕಿ ಮತ್ತು ಶಾಸಕಿ ಅನೀತಾ ಶರ್ಮಾ ಅವರು ಶುಕ್ರವಾರ ಕರೆ ನೀಡಿದರು. ಇದಕ್ಕಾಗಿ ಎಲ್ಲರೂ ಮುಂದೆ ಬರಬೇಕೆಂದು ಒತ್ತಾಯಿಸಿದರು.

Advertisement

ಪುರಿ ಶಂಕರಾಚಾರ್ಯ, ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

“ನಾವೆಲ್ಲರೂ ಎಲ್ಲೇ ಇದ್ದರೂ, ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ನಾವು ಹಿಂದೂಗಳ ಪರವಾಗಿ ಮಾತನಾಡಬೇಕು, ಅದು ಹಿಂದೂಗಳು ಒಟ್ಟಾಗಿ ನಿಂತಾಗ ಮಾತ್ರ ಸಾಧ್ಯ” ಎಂದು ಛತ್ತೀಸ್‌ ಗಢದ ಧರ್ಶಿವಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಹೇಳಿದರು.

ಶಾಸಕಿ ಅನೀತಾ ಶರ್ಮಾ ಹೇಳಿಕೆಯ ನಂತರ, ಕಾಂಗ್ರೆಸ್ ಪಕ್ಷವು ಹೇಳಿಕೆಯಿಂದ ದೂರವಿದ್ದು, ಇದನ್ನು ” ಆಕೆಯ ವೈಯಕ್ತಿಕ ಅಭಿಪ್ರಾಯ” ಎಂದು ಕರೆದಿದೆ.

ಇದನ್ನೂ ಓದಿ:ಶಿವಮೊಗ್ಗ: ಬೆಚ್ಚಿಬೀಳಿಸಿದ ಒಂಟಿ ಮಹಿಳೆ ಕೊಲೆ; ಬಾಯಿಗೆ ಬಟ್ಟೆತುರುಕಿ ಉಸಿರುಗಟ್ಟಿಸಿ ಕೊಲೆ

Advertisement

ಬಳಿಕ ಮಾತನಾಡಿದ ಶಾಸಕಿ ಅನೀತಾ ಶರ್ಮಾ, ತಮ್ಮ ಹೇಳಿಕೆಯನ್ನು ಪ್ರತಿಪಕ್ಷಗಳು ತಪ್ಪಾಗಿ ಬಿಂಬಿಸಿದ್ದಾರೆ ಎಂದಿದ್ದಾರೆ.

“ದೇಶದಲ್ಲಿ ವಿವಿಧ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಮತ್ತು ನಾವು ಯಾರನ್ನೂ ಒಡೆಯಲು ಬಯಸುವುದಿಲ್ಲ, ನಮ್ಮ ನಾಯಕ (ರಾಹುಲ್ ಗಾಂಧಿ) ಜನರನ್ನು ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ನಡೆಸುತ್ತಾರೆ ಏಕೆಂದರೆ ಬಿಜೆಪಿಗೆ ಸೇರಿದ ಕೆಲವೇ ಜನರು ಸಮಾಜದಲ್ಲಿ ಒಡಕು ಮೂಡಿಸಲು ತೊಡಗಿದ್ದಾರೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್ಐ ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next