Advertisement

ಹಿಜಾಬ್‌ ವಿವಾದ: ಪ್ರಧಾನಿ ಮೋದಿ ಮೌನವಹಿಸಿರುವುದೇಕೆ?

09:45 AM Feb 20, 2022 | Team Udayavani |

ಚಿಕ್ಕಬಳ್ಳಾಪುರ: ಪ್ರಧಾನಿ ಮೋದಿಗೆ ನಿಜವಾಗಿಯೂ ದೇಶಭಕ್ತಿ ಇದ್ದರೆ, ಸಂವಿಧಾನದ ಬಗ್ಗೆ ನಂಬಿಕೆ ಅಥವಾ ವಿಶ್ವಾಸ ಇದ್ದರೆ, ಸಚಿವ ಕೆ.ಎಸ್‌.ಈಶ್ವರಪ್ಪ ನೀಡಿರುವ ಹೇಳಿಕೆ ಖಂಡಿಸಬೇಕಿತ್ತು ಎಂದು ಕೇಂದ್ರ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.

Advertisement

ತಾಲೂಕಿನ ನಂದಿ ಗ್ರಾಮದಲ್ಲಿ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಹಿಜಾಬ್‌, ಕೇಸರಿ ಶಾಲು ವಿವಾದ ಸೃಷ್ಟಿ ಮಾಡಿ, ಮಕ್ಕಳ ಶೈಕ್ಷಣಿಕ ಭವಿಷ್ಯದೊಂದಿಗೆ ಬಿಜೆಪಿಯರು ಆಟವಾಡುತ್ತಿದ್ದಾರೆ. ಹಿಜಾಬ್‌ ಧರಿಸುವುದು ಆಕ್ಷೇಪಣೆ ಮಾಡುವಂತಹ ವಿಚಾರವಲ್ಲ. ಉಡುಪಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಹೆಣ್ಣು ಮಕ್ಕಳು ಹಿಜಾಬ್‌ ಧರಿಸಿಕೊಂಡು ಶಾಲಾ-  ಕಾಲೇಜುಗಳಿಗೆ ಬರುತ್ತಿದ್ದಾರೆ. ಕೆಲವರು ಕೇಸರಿಶಾಲು ಧರಿಸಿ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಆರ್‌.ಎಸ್‌. ಎಸ್‌ ನೇರ ಹೊಣೆ ಎಂದು ಆರೋಪಿಸಿದರು.

ಪ್ರಧಾನಿ ಮೌನವಾಗಿರುವುದೇಕೆ?: ಅನಗತ್ಯವಾಗಿ ಹಿಜಾಬ್‌ ವಿವಾದ ಸೃಷ್ಟಿಸಲಾಗಿದೆ. ಈ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರವೇ ವಿವಾದ ಸೃಷ್ಟಿ ಮಾಡುತ್ತಿರುವ ಪರವಾಗಿ ನಿಂತಿದೆ. ಪ್ರಧಾನಿಮೋದಿ ಕೂಡ ಮೌನವಾಗಿರುವುದನ್ನು ಕಂಡರೆ, ಅವರಿಗೆ ನಿಜವಾದ ದೇಶಭಕ್ತಿ ಇಲ್ಲ ಮತ್ತು ಈ ದೇಶದ ಜಾತ್ಯತೀತ ಸಿದ್ಧಾಂತ, ಸಂವಿಧಾನ ನೀಡಿರುವ ಮೂಲಭೂತ ಹಕ್ಕು ನಿರಾಕರಿಸಿರುವವರ ಪರ ನಿಂತಿರುವುದು ಸರಿಯಲ್ಲ ಎಂದರು.

ಘೋಷಣೆಗೆ ಸೀಮಿತ ಬೇಡ: ಪ್ರಧಾನಿ ಮೋದಿ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದ  ಬೇಕು, ಅವರಿಗೆ ರಕ್ಷಣೆ ನೀಡುವ ಸಲುವಾಗಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಪರಿಚಯಿಸಿದ್ದಾರೆ. ಅದು ಕೇವಲ ಘೋಷಣೆಗೆ ಸೀಮಿತ ಆಗಬಾರದು. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದ ಮಾಜಿ ಸಿಎಂ, ಅದಕ್ಕೆ ವಿರುದ್ಧವಾದ ವಿದ್ಯಾಮಾನ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದುಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ಜನರಿಗೆ ಸದಸ್ಯತ್ವ ನೀಡುವ ಗುರಿ ಹೊಂದಿದ್ದೇವೆ. ಅದರ ಪ್ರಕಾರ ಆಗುತ್ತಿದೆ ಎಂದರು.

Advertisement

ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಅನುಸೂಯಮ್ಮ, ಮಾಲೂರು ಮಾಜಿ ಶಾಸಕ ಎ.ನಾಗರಾಜ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯಶಂಕರ್‌, ರಾಜ್ಯಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷಯಲುವಹಳ್ಳಿ ರಮೇಶ್‌, ಮುಖಂಡರಾದ ಆಂಜಿನಪ್ಪ, ಕೆಪಿಸಿಸಿ ಸದಸ್ಯ ವಿನಯ್‌ ಎನ್‌. ಶ್ಯಾಮ್‌, ಕೊಂಡೇನಹಳ್ಳಿ ಚಂದ್ರಪ್ಪ, ಕೋಚಿಮುಲ್‌ ನಿರ್ದೇಶಕ ಭರಣಿ ವೆಂಕಟೇಶ್‌, ಕೆಪಿಸಿಸಿ ಸದಸ್ಯ ಮುನೇಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮೋಹನ್‌ರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೇಶವರೆಡ್ಡಿ, ಉಪಾಧ್ಯಕ್ಷ ಬಿ.ಎಸ್‌.ರಫಿವುಲ್ಲಾ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮುದಾಸೀರ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರಮ್ಮ,ಕಿಸಾನ್‌ ಘಟಕದ ಜಾತವಾರ ರಾಮಕೃಷ್ಣಪ್ಪ,ಮೈನಾರಿಟಿ ಘಟಕದ ಅಧ್ಯಕ್ಷ ಸಮೀಉಲ್ಲಾ, ಡಿ.ಕೆ.ಶಿವಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಜನಾರ್ದನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next