ಜೋರ್ಹತ್ (ಅಸ್ಸಾಂ): 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕಯು ಭಾರತಕ್ಕಿಂತ ನೆರೆಯ ಪಾಕಿಸ್ತಾನದ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದರು.
ಮತ್ತೊಂದೆಡೆ, ಬಿಸ್ವಾ ಶರ್ಮಾ ಅವರು ಪಕ್ಷದ ಜಾತ್ಯತೀತ ಮತ್ತು ಅಂತರ್ಗತ ನೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ತನ್ನ ಪ್ರಣಾಳಿಕೆಯು ಸಮಾಜದ ಎಲ್ಲಾ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವ ಗುರಿಯನ್ನು ಹೊಂದಿದೆ ಎಂದು ಪ್ರತಿಪಾದಿಸಿದೆ.
ಅಧಿಕಾರಕ್ಕೆ ಬರಲು ಸಮಾಜವನ್ನು ವಿಭಜಿಸುವ ಗುರಿಯನ್ನು ಹೊಂದಿದೆ ಎಂದು ಹೇಳುವ ಮೂಲಕ ವಿರೋಧ ಪಕ್ಷವು ಹೊರತಂದಿರುವ ಚುನಾವಣಾ ಪ್ರಣಾಖಳಿಕೆಯನ್ನು ಅಸ್ಸಾಂ ಸಿಎಂ ಖಂಡಿಸಿದ್ದಾರೆ.
ಇದು ಸಮಾಧಾನಗೊಳಿಸುವ ರಾಜಕೀಯ ಮತ್ತು ಇದನ್ನು ನಾವು ಖಂಡಿಸುತ್ತೇವೆ. ಇದು ಭಾರತಕ್ಕೆ ಮಾಡಿದ ಪ್ರಣಾಳಿಕೆಯಂತೆ ಕಾಣುತ್ತಿಲ್ಲ, ಇದು ಪಾಕಿಸ್ತಾನದ ಚುನಾವಣೆಗೆ ಸೂಕ್ತವಾಗಿದೆ ಎಂದು ಶರ್ಮಾ ಅವರು ಸುದ್ದಿಗಾರರಿಗೆ ಶನಿವಾರ ಹೇಳಿದರು.
ದೇಶದ ಯಾವುದೇ ವ್ಯಕ್ತಿ, ಹಿಂದೂ ಅಥವಾ ಮುಸ್ಲಿಂ, ತ್ರಿವಳಿ ತಲಾಖ್ ಪುನರ್ ಸ್ಥಾಪಿಸಲು ಬಯಸುವುದಿಲ್ಲ. ಬಾಲ್ಯ ವಿವಾಹ ಅಥವಾ ಬಹುಪತ್ನಿತ್ವವನ್ನು ಬೆಂಬಲಿಸುವುದಿಲ್ಲ ಎಂದು ಶರ್ಮಾ ಹೇಳಿದರು.