Advertisement

ಕಾಂಗ್ರೆಸ್‌ ಜನರ ಮನ್‌ ಕೀ ಬಾತ್‌ ಆಲಿಸಿ ಸಮಸ್ಯೆ ಪರಿಹರಿಸುತ್ತಿದೆ: ರೈ

09:17 AM Apr 11, 2018 | Team Udayavani |

ಮಂಗಳೂರು: ಜನರ ಮತೀಯ ಭಾವನೆ ಕೆರಳಿಸಿ ಮತ ಪಡೆಯುವುದೇ ಬಿಜೆಪಿಯ ಚುನಾವಣಾ ಅಸ್ತ್ರ. ಆದರೆ ಕಾಂಗ್ರೆಸ್‌ ಜನರ ಮನ್‌ ಕೀ ಬಾತ್‌ ಆಲಿಸಿ ಅದನ್ನು ಪರಿಹರಿಸುವ ಕಾರ್ಯ ಮಾಡುತ್ತಿದೆ. ಹೀಗಾಗಿ ಈ ಬಾರಿ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಸಚಿವ ಬಿ. ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಂಗಳವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಶಾಸಕರು ತಮ್ಮ ತಮ್ಮ ಕ್ಷೇತ್ರ ಗಳಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳೇ ಪಕ್ಷಕ್ಕೆ ಶ್ರೀರಕ್ಷೆ ಯಾಗಲಿವೆ ಎಂದರು.

ಕಪ್ಪು ಹಣ – ಈಗೇಕೆ ಮೌನ?
ಕೇಂದ್ರ ಸರಕಾರ ತಾನು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಹೇಳಿದ ಎಲ್ಲ ಮಾತುಗಳಿಗೂ ಈ ಯೂಟರ್ನ್ ಹೊಡೆದಿದೆ. ಇಂಧನದ ಬೆಲೆ ಬ್ಯಾರಲ್‌ಗೆ 40 ಡಾಲರ್‌ಗೆ ಇಳಿದರೂ ಪೆಟ್ರೋಲ್‌-ಡೀಸೆಲ್‌ ದರ ಗಗನ  ಕ್ಕೇರಿದೆ. ಅಡುಗೆ ಅನಿಲ ದರ ದುಪ್ಪಟ್ಟಾಗಿದೆ. ಕಪ್ಪು ಹಣ ತರುವುದಾಗಿ ಹೇಳಿ ದವರು ಈಗ ಆ ಕುರಿತು ಮಾತನಾಡುತ್ತಿಲ್ಲ ಎಂದು ರೈ ಆರೋಪಿಸಿದರು.

ರಾಜ್ಯ ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ದಂಥ ಯೋಜನೆ ನೀಡಿದೆ. ಆದರೆ ಕೇಂದ್ರ ಕೈಗಾರಿಕೋದ್ಯಮಿಗಳ ಸಾಲಮನ್ನಾ ಮಾಡುತ್ತಿದೆ. ಸಿಬಿಎಸ್‌ಇ ಪ್ರಶ್ನೆಪತ್ರಿಕೆ, ಫೇಸ್‌ ಬುಕ್‌ ವಿವರ, ಆಧಾರ್‌, ಚುನಾವಣೆ ದಿನಾಂಕ ಸೋರಿಕೆ ಕೇಂದ್ರದ ಸಾಧನೆ. ನೋಟು ರದ್ದತಿ ವಿಚಾರವೂ ಬಹಿರಂಗ ವಾಗಿತ್ತು ಎಂದು ನಮ್ಮ ಗಮನಕ್ಕೆ ಬಂದಿದೆ ಎಂದರು. 

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್‌; ಧನಂಜಯ ಅಡ³ಂಗಾಯ, ಡಿ.ಎಸ್‌. ಮಮತಾ ಗಟ್ಟಿ, ಎಂ. ಶಶಿಧರ ಹೆಗ್ಡೆ, ದೀಪಕ್‌ ಪೂಜಾರಿ, ರಾಜಶೇಖರ್‌ ನಾಯಕ್‌, ಪದ್ಮನಾಭ ನರಿಂಗಾನ, ಸಂತೋಷ್‌ಕುಮಾರ್‌, ವಿಶ್ವಾಸ್‌ಕುಮಾರ್‌ದಾಸ್‌, ನವೀನ್‌ ಡಿ’ಸೋಜಾ, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು. 

Advertisement

ಅಸ್ತಿತ್ವವನ್ನು ಪ್ರಶ್ನಿಸಿದ್ದಾರೆ
ಕಲ್ಲಡ್ಕ ಡಾ| ಪ್ರಭಾಕರ ಭಟ್‌ ಅವರು ದೈವಾ ರಾಧನೆಯ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಓಟಿಗಾಗಿ ಪ್ರಚೋದನಕಾರಿಯಾಗಿ ಮಾತ ನಾಡು ತ್ತಿದ್ದಾರೆ ಎಂದು ರೈ ಆರೋಪಿಸಿದರು. 

ಬಿಜೆಪಿಯ ಟಿಕೆಟ್‌ ಆಯ್ಕೆಯಲ್ಲಿ ಅತೃಪ್ತ ಕಾರ್ಯ ಕರ್ತರು ನಮ್ಮ ಸಂಪರ್ಕ ದಲ್ಲಿದ್ದಾರೆ. ತಾನು ನಿರಂತರ ವಾಗಿ ಜನ ಸಂಪರ್ಕ ಇಟ್ಟುಕೊಂಡವನು. ಈ ಕುರಿತು ನನಗೆ ತೃಪ್ತಿ ಇದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next