Advertisement

ರಫೇಲ್‌ ಬಗ್ಗೆ ಸಿಎಜಿಗೆ ದೂರು

06:00 AM Sep 20, 2018 | Team Udayavani |

ಹೊಸದಿಲ್ಲಿ: ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಹಾಲೇಖಪಾಲ (ಸಿಎಜಿ) ರಾಜೀವ್‌ ಮಹರ್ಷಿ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ನೇತೃತ್ವದ ಪಕ್ಷದ ನಿಯೋಗ ಒಪ್ಪಂದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಜಿ, ಈ ವಿಚಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.  ಸಂಸತ್ತಿಗೆ ವರದಿ ಸಲ್ಲಿಸಲಾಗುತ್ತದೆ. ಕಾಂಗ್ರೆಸ್‌ ಎತ್ತಿರುವ ವಿಚಾರಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದಿದೆ. ಕಾಂಗ್ರೆಸ್‌ ಮುಖಂಡರು  ಡೀಲ್‌ನಲ್ಲಿನ ಅವ್ಯವಹಾರಗಳ ಕುರಿತು ಗಮನ ಸೆಳೆದರು. ಅಲ್ಲದೆ ಈ ಬಗ್ಗೆ ಶೀಘ್ರ ವರದಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

Advertisement

ಅಗತ್ಯವಿಲ್ಲ: ಇದೇ ವೇಳೆ ಸಂಸತ್‌ನ ಜಂಟಿ ಸಂಸದೀಯ ಸಮಿತಿ ರಚನೆ ಮಾಡಿ ಏಕೆ ತನಿಖೆಗೆ ಆದೇಶ ನೀಡಲಿಲ್ಲ ಎಂದು ಮಾಜಿ ಸಚಿವ ಎ.ಕೆ.ಆ್ಯಂಟನಿ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ರವಿಶಂಕರ ಪ್ರಸಾದ್‌  ತಪ್ಪು ಮಾಹಿತಿ ಹೊಂದಿರುವ ಅಹಂ ತುಂಬಿಕೊಂಡ ಕಾಂಗ್ರೆಸ್‌ ಮುಖಂಡರನ್ನು ಸಂತೃಪ್ತ ಪಡಿಸಲು ಜಂಟಿ ಸಂಸದೀಯ ಸಮಿತಿ ಅಥವಾ ಸಿಎಜಿ ತನಿಖೆಗೆ ಆದೇಶಿಸುವ ಅಗತ್ಯವಿಲ್ಲ ಎಂದಿದ್ದಾರೆ. ಎಚ್‌ಎಎಲ್‌ ಅನ್ನು ಒಪ್ಪಂದದಿಂದ ಹೊರಗಿಟ್ಟ ಬಗ್ಗೆ ಆ್ಯಂಟನಿಯವರೇ ಹೆಚ್ಚಿನ ಉತ್ತರ ನೀಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next