Advertisement
ಅವರು ಸೋಮವಾರ ಹಾನಗಲ್ಲ ಉಪಚುನಾವಣೆ ಹಿನ್ನಲೆಯಲ್ಲಿ ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
Related Articles
Advertisement
ಹಣ ಸಂಗ್ರಹ ಮಾಡಿದ ಚೀಫ್ ಎಂಜನಿಯರ್ ಗಳು ಇದುವರೆಗೆ ಸಸ್ಪೆಂಡ್ ಆಗಿಲ್ಲ. ಸಸ್ಪೆಂಡ್ ಮಾಡಲು ಬಿಜೆಪಿ ಸರಕಾರ ಮಹೂರ್ತ ನೋಡುತ್ತಾ ಇದೆಯಾ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಾನಗಲ್ಲ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಕಳೆದ ಮೂರು ವರ್ಷದಿಂದ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿದ್ದಾರೆ. ಅವರ ಬಗ್ಗೆ ಉತ್ತಮ ಫೀಡ್ ಬ್ಯಾಕ್ ನಮಗೆ ಬಂದಿದೆ ಎಂದರು.
ಆಡಳಿತ ಪಕ್ಷ ಕಾನೂನು ಬಾಹೀರ ಕೆಲಸ ಮಾಡೋ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಮೂಖ ಪ್ರೇಕ್ಷಕರಾಗಿ ಸುಮ್ಮನೆ ಕುಳಿತುಕೊಳ್ಳದೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಹಾನಗಲ್ ಬೈ ಎಲೆಕ್ಷನ್ ಗೆ ಕೆಲವರಿಗೆ ವಿಶೇಷ ಜವಾಬ್ದಾರಿ ನೀಡಿದ್ದು ಹಾನಗಲ್ ಉಪ ಚುನಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷರನ್ನಾಗಿ ನನಗೆ ಜವಾಬ್ದಾರಿ ನೀಡಲಾಗಿದೆ. ಇಂದಿನಿಂದ ಸಮಿತಿ ಕೆಲಸ ಶುರು ಮಾಡಿದೆ ಎಂದರು.
ಬಿಜೆಪಿ ಸರಕಾರದಿಂದ ಸ್ವಾಯತ್ತ ಸಂಸ್ಥೆಗಳ ದುರಪಯೋಗ ಹೆಚ್ಚಿದ್ದು ಇಂದಿನ ಸರಕಾರದಲ್ಲಿ ಪಾರದರ್ಶಕತೆ ದೂರವಾಗಿದೆ. ಸತ್ಯವನ್ನು ಬಿಂಬಿಸಬೇಕಾದ ಜವಾಬ್ದಾರಿಯನ್ನು ಸಂಸ್ಥೆಗಳು ಕಳೆದುಕೊಂಡಿವೆ. ಅದರಲ್ಲೂ ಮಾಧ್ಯಮವು ಒಂದು. ಮಾಧ್ಯಮದ ಶಕ್ತಿಯನ್ನು ಕುಗ್ಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಟೀಕಿಸಿದರು.
ತೈಲ ಬೆಲೆ ಏರಿಕೆಗೆ ಆಯಿಲ್ ಬಾಂಡ್ ಕಾರಣವಾಗಿದ್ದರೆ, ಕೇಂದ್ರ ಸರಕಾರ ಜನರ ಪರವಾಗಿ ಹಣ ಸಂದಾಯ ಮಾಡಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ದೇಶದಲ್ಲಿ ಬೆಲೆ ಏರಿಕೆ ದುಷ್ಪರಿಣಾಮ ಜನ ಎದುರಿಸುತ್ತಿದ್ದಾರೆ. ಜನಸಾಮಾನ್ಯರು ಜೀವನ ಮಾಡುವುದು ಕಷ್ಟ ಆಗಿದೆ. ಬಡವರು ಗಳಿಸುವುದು ನೂರು ರೂಪಾಯಿ ಪೆಟ್ರೋಲ್ 110 ರೂ ಆದರೆ ಏನ್ ಮಾಡುವುದು ಎಂದು ಪ್ರಶ್ನಿಸಿದರು.
ಶ್ರೀನಿವಾಸ ಮಾನೆ ಅವರು ಯುವ ನಾಯಕರಾಗಿದ್ದು ಶಾಸನ ಸಭೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಅವರು ಹಾನಗಲ್ ಗೆ ವಲಸೆ ಬಂದಿಲ್ಲ ಮೂರು ವರ್ಷಗಳಿಂದ ಇಲ್ಲಿಯೇ ನಿರಂತರ ಕೆಲಸ ಮಾಡಿದ್ದಾರೆ. ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ದೇಶದಲ್ಲಿ ಆಡಳಿತ ನಡೆಸುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ವಿಫಲವಾಗಿವೆ. ಮತ ಕೇಳುವ ಹಕ್ಕು ಬಿಜೆಪಿ ಕಳೆದುಕೊಂಡಿದೆ. ಈ ಬಾರಿ ಕಾಂಗ್ರೆಸ್ ಗೆ ಎಲ್ಲ ವರ್ಗದ ಜನರ ಆಶೀರ್ವಾದ ಇದೆ. ಕಳೆದ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಅವರು ಕಡಿಮೆ ಅಂತರದಲ್ಲಿ ಸೋತಿದ್ದರು. ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಈ ಉಪಚುನಾವಣೆಯಲ್ಲಿ ನಮ್ಮ ಸರ್ವೇ ಮಾಹಿತಿ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಸುಮಾರು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.