Advertisement

ಸಮಿತಿಯಿಂದ ರಾಹುಲ್‌ ಸೋನಿಯಾ ಹೊರಕ್ಕೆ; ಸಂಜೆ “ಕೈ” ನಾಯಕನ ಆಯ್ಕೆ ಸಾಧ್ಯತೆ

09:24 AM Aug 11, 2019 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಶನಿವಾರ ಸಿಗುತ್ತದೆ ಎಂದು ಹೇಳಲಾದರೂ ಈ ಬಗ್ಗೆ ಹೆಚ್ಚಿನ ಬೆಳವಣಿಗೆಗಳು ನಡೆದಿಲ್ಲ. ಏತನ್ಮಧ್ಯೆ ಮುಂದಿನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಾವು ತಲೆ ಹಾಕದಿರಲು ಕಾಂಗ್ರೆಸ್‌ನ ಪರಮೋತ್ಛ ನಾಯಕರಾದ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ನಿರ್ಧರಿಸಿದ್ದಾರೆ. ಜೊತೆಗೆ ಆಯ್ಕೆ ವಿಚಾರವನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಮತ್ತು ಎಲ್ಲ ರಾಜ್ಯಗಳ ಪ್ರಾದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಿಗೆ ಬಿಟ್ಟುಬಿಟ್ಟಿದ್ದಾರೆ. ಇಂದು ಸಂಜೆ ಕಾಂಗ್ರೆಸ್ ಹೈಕಮಾಂಡ್ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Advertisement

ಶನಿವಾರ ಸಭೆ ಸೇರಿದ ಸಿಡಬ್ಲ್ಯೂ ಸಿ ಐದು ಗುಂಪುಗಳನ್ನು ರಚಿಸಿ ಅಧ್ಯಕ್ಷರ ಆಯ್ಕೆಗೆ ಅವುಗಳ ಸಲಹೆಗಳನ್ನು ಪಡೆಯುವ ಬಗ್ಗೆ ತೀರ್ಮಾನಿಸಿತು. ಇದೊಂದು ಪ್ರಕ್ರಿಯೆಯಾಗಿದ್ದು ಇದರಲ್ಲಿ ಭಾಗಿಯಾಗದೇ ಇರಲು ರಾಹುಲ್‌ ಸೋನಿಯಾ ತೀರ್ಮಾನಿಸಿದ್ದಾರೆ ಎಂದು ಸಮಿತಿ ಹೇಳಿದೆ.

ಇದೇ ವೇಳೆ ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನು ಮರುಪರಿಶೀಲಿಸಬೇಕು ಎನ್ನುವ ಸಮಿತಿಯ ಬೇಡಿಕೆಯನ್ನೂ ರಾಹುಲ್‌ ಅವರು ತಿರಸ್ಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next