ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಮದ್ಯ ನೀಡಿ ಎಂದು ಹೇಳುವ ಮೂಲಕ ಹರಿಯಾಣದ ಕಾಂಗ್ರೆಸ್ ನಾಯಕಿ ವಿದ್ಯಾರಾಣಿ ವಿವಾದ ಎಬ್ಬಿಸಿದ್ದಾರೆ.
ಇಂದು ರೈತರ ಪ್ರತಿಭಟನೆ ಕುರಿತು ಮಾತಾಡಿದ ವಿದ್ಯಾರಾಣಿ, ರೈತರ ಆಂದೋಲನ ಒಳ್ಳೆಯ ಉದ್ದೇಶದಿಂದ ನಡೆಯುತ್ತಿದೆ. ಅವರಿಗೆ ನಾವು ಬೆಂಬಲ ನೀಡಬೇಕು. ಇದರಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ. ರೈತರಿಗೆ ಅಗತ್ಯವಿರುವ ಎಲ್ಲವನ್ನೂ ನೀಡಿ, ಅದು ಹಣವಾಗಿರಬಹುದು, ತರಕಾರಿಯಾಗಿರಬಹುದು ಇಲ್ಲವೆ ಮದ್ಯ ( ಸಾರಾಯಿ) ಆಗಿರಬಹುದು ಎಂದಿದ್ದಾರೆ.
ವಿದ್ಯಾರಾಣಿ ಅವರ ಈ ಹೇಳಿಕೆ ವಿವಾದದ ರೂಪ ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕಿ ವಿರುದ್ಧ ಟೀಕೆಗಳ ಸುರಿಮಳೆಯಾಗಿದೆ.
ಇದನ್ನೂ ಓದಿ:ಕಂದಕಕ್ಕೆ ಉರುಳಿದ ಕಾರು …6 ಜನರ ದುರ್ಮರಣ
ವಿದ್ಯಾರಾಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ನಮ್ಮ ಪ್ರತಿಭಟನಾ ಸ್ಥಳದಲ್ಲಿ ಎಣ್ಣೆಯ ಅಗತ್ಯವಾದರೂ ಏನಿದೆ. ಅವರು ಹೀಗೇಕೆ ಹೇಳಿದರೂ ಅಂತಾ ಗೊತ್ತಿಲ್ಲ. ಇಂತವರ ಬೆಂಬಲ ನಮ್ಮ ಹೋರಾಟಕ್ಕೆ ಬೇಡ ಎಂದು ತಿರುಗೇಟು ನೀಡಿದ್ದಾರೆ.