Advertisement

“ಅರೆಸ್ಟ್ ಮಿ ಟೂ” : ಕೇಂದ್ರ ಸರ್ಕಾರಕ್ಕೆ ನನ್ನನ್ನೂ ಬಂಧಿಸಿ ಎಂದು ಕೇಳಿಕೊಂಡ ಗಾಂಧಿ

08:31 PM May 16, 2021 | Team Udayavani |

ನವ ದೆಹಲಿ : ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸರಿಯಾಗಿ ನೀಭಾಯಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸಿ ಹಾಕಿದ್ದ ಪೋಸ್ಟರ್ ಗಳಿಗೆ ಸಂಬಂಧಿಸಿದಂತೆ 17 ಮಂದಿಯನ್ನು ರಾಷ್ಟ್ರ ರಾಜಧಾನಿ ಪೊಲೀಸರು ಬಂಧಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಆ ವಿರೋಧದ ಧ್ವನಿಗೆ ತಮ್ಮ ಧ್ವನಿ ಸೇರಿಸಿದ್ದಾರೆ.

Advertisement

ಈ  ಕುರಿತಾಗಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಗಾಂಧಿ ಅರೆಸ್ಟ್ ಮಿ ಟೂ… (ನನ್ನನ್ನೂ ಬಂಧಿಸಿ) ಎಂದು ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಟಗ್ ದುರಂತ ಮತ್ತು ಕೋರಮಂಡಲ ಹಡಗು ದುರಂತದ ಕುರಿತು ಸೂಕ್ತ ತನಿಖೆಯಾಗಲಿ : ಶಾಸಕ ಭರತ್ ಶೆಟ್ಟಿ

ಮಾತ್ರವಲ್ಲದೇ, ಮೋದಿ ಜೀ, ದೇಶದ ಮಕ್ಕಳ ಪಾಲಿಗೆ ಸಿಗಬೇಕಾದ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕೊಟ್ಟಿರಿ..? ಎಂದು ಪ್ರಶ್ನೆ ಮಾಡಿದ್ದಲ್ಲದೇ, ಆ ಪ್ರಶ್ನೆ ಇರುವ ಫೋಟೋವನ್ನೇ ತಮ್ಮ ಟ್ವೀಟರ್ ಖಾತೆಯ ಪ್ರೊಫೈಲ್ ಫೋಟೊವನ್ನಾಗಿ ಮಾಡಿಕೊಂಡಿದ್ದಾರೆ.


ಕೋವಿಡ್ ಸೋಂಕಿನ ಎರಡನೇ ಅಲೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಆತಂಕವನ್ನು ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸರ್ಕಾರ ನಿರ್ವಹಣೆಯ ಬಗ್ಗೆ ಟೀಕೆಗಳು ವ್ಯಾಪಕವಾಗಿ ಕೇಳಿ ಬಂದಿತ್ತು. ಕಳೆದಕೆಲವು ವಾರಗಳಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವೈಫಲ್ಯವನ್ನು ಟೀಕಿಸುವ  ಪೋಸ್ಟರ್ ಗಳು ದೆಹಲಿಯಲ್ಲಿ

Advertisement

ಹಾಗೂ  ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವ ವಾಕ್ಯಗಳಿರುವ ಪೋಸ್ಟರ್​​ಗಳು ಕಳೆದ ಕೆಲವು ದಿನಗಳಿಂದಲೂ ದೆಹಲಿಯಲ್ಲಿ ಅಲ್ಲಲ್ಲಿ ಕಾಣಿಸುತ್ತಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಸುಮಾರು 17 ಜನರನ್ನು ದೆಹಲಿ ಪೊಲೀಸರು ನಿನ್ನೆ(ಶನಿವಾರ) ಬಂಧಿಸಿದ್ದರು.

ದೆಹಲಿ ಪೊಲೀಸರು ನೇರವಾಗಿ ಕೇಂದ್ರ ಗೃಹ ಇಲಾಖೆಯಡಿ ಬರುತ್ತಾರೆ. ಏನೇ ಇದ್ದರೂ ಅವರು ಗೃಹ ಇಲಾಖೆಗೆ ರಿಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ. ನಿನ್ನೆ 17 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಪೋಸ್ಟರ್ ​ಗೆ ಸಂಬಂಧಪಟ್ಟಂತೆ, ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದ ಕಾಯ್ದೆ ಮತ್ತು ಸೆಕ್ಷನ್​ 188ರಡಿ ಒಟ್ಟು 21 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾಗಿ ವರದಿ ನೀಡಿದ್ದಾರೆ.

17 ಜನರ ಬಂಧನಕ್ಕೆ ಸಂಬಂಧಪಟ್ಟಂತೆ ಕೇವಲ ರಾಹುಲ್ ಗಾಂಧಿಯಲ್ಲದೆ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್​, ವಕ್ತಾರರಾದ ಡಾ. ಶಮಾ ಮೊಹಮ್ಮದ್​, ಹೋರಾಟಗಾರ ಸಾಕೇತ್ ಗೋಖಲೆ ಮತ್ತಿತರರೂ ಕೂಡ ಕೇಂದ್ರ ಸರ್ಕಾರದ ಈ ಧೋರಣೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ  ಜೈರಾಮ್ ರಮೇಶ್​, ನಾನು ನನ್ನ ಮನೆಯ ಕಾಂಪೌಂಡ್ ಮೇಲೆಲ್ಲ ಪೋಸ್ಟರ್​ ಅಂಟಿಸುತ್ತೇನೆ. ನನ್ನನ್ನೂ ಬಂಧಿಸಿ ಎಂದು ದೆಹಲಿ ಪೊಲೀಸರು, ಗೃಹ ಸಚಿವ ಅಮಿತ್​ ಶಾ ಅವರಿಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿಂದು 31531 ಕೋವಿಡ್ ಪಾಸಿಟಿವ್ ಪ್ರಕರಣ; 403 ಜನರು ಸಾವು

Advertisement

Udayavani is now on Telegram. Click here to join our channel and stay updated with the latest news.

Next