ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನರ್ ರಚನೆ ಆದ ಬೆನ್ನಿಗೆ ಕಾಂಗ್ರಸ್ ನಾಯಕ, ಕೇರಳದ ವಯನಾಡಿನ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಮನ್ಸುಖ್ ಮಾಂಡವಿಯಾ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕಸಿದ ಬೆನ್ನಲ್ಲೇ, ಪರೋಕ್ಷವಾಗಿ ಟೀಕಿಸಿದ ಗಾಂಧಿ, ಇದು ಲಸಿಕೆಯ ಕೊರತೆ ಇಲ್ಲ ಎಂದರ್ಥವೇ ಎಂದು ಕೇಳಿದ್ದಾರೆ.
ಇದನ್ನೂ ಓದಿ : ರಾಜ್ಯ,ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ 37.93ಕೋಟಿ ಲಸಿಕೆ ಪ್ರಮಾಣಗಳ ಪೂರೈಕೆ : ಕೇಂದ್ರ
ಈ ಹಿಂದೆಯೂ ಕೂಡ ರಾಹುಲ್ ಗಾಂಧಿ ಲಸಿಕೆಯ ಕೊರತೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರದ ವಿರುದ್ದ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಹಲವಾರು ಟ್ವೀಟಾಸ್ತ್ರವನ್ನು ಬಿಟ್ಟಿದ್ದರು. ರಾಜ್ಯಗಳಿಗೆ ಲಸಿಕೆಗಳನ್ನು ಪೂರೈಸುವುದನ್ನು ಹೊರತಾಗಿ ಕೇಂದ್ರ ಸರ್ಕಾರ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಪಯತ್ನದಲ್ಲಿ ತೊಡಗಿದೆ ಎಂದು ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಇನ್ನು, ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಕೊನೆಯ ಪತ್ರಿಕಾಗೋಷ್ಟಿಯಲ್ಲಿ ಜುಲೈಯಲ್ಲಿ ಎಲ್ಲಾ ರಾಜ್ಯಗಳಿಗೆ ಲಸಿಕೆಯನ್ನು ಪೂರೈಸಲಾಗುತ್ತದೆ ಎಂದು ಹೇಳಿದ್ದನ್ನು ಉಲ್ಲೇಖಿಸಿ, ಇದಾಗಲೇ ಜುಲೈ, ಲಸಿಕೆಗಳು ಎಲ್ಲಿವೆ ಎಂದು ವ್ಯಂಗ್ಯವಾಗಿ ಟ್ವೀಟರ್ ನಲ್ಲಿ ಕೇಂದ್ರವನ್ನು ಪ್ರಶ್ನಿಸಿದ್ದರು.