ವಯನಾಡ್ : ಲೋಕಸಭಾ ವಿಪಕ್ಷ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಗುರುವಾರ ಭೀಕರ ಭೂಕುಸಿತದ ಸಂತ್ರಸ್ತರ ಭೇಟಿ ಮಾಡಿ ನಾಮಾವಶೇಷಗೊಂಡ ಸ್ಥಳಗಳ ಪರಿಸ್ಥಿತಿ ಪರಿಶೀಲನೆ ನಡೆಸಿ ಭಾವುಕರಾದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ” , ನನ್ನ ತಂದೆಯನ್ನು ಕಳೆದುಕೊಂಡ ನಾನು ಹೇಗೆ ಅನುಭವಿಸಿದೆನೋ ಅದೇ ನೋವು ಅನುಭನಿಸುತ್ತಿದ್ದೇನೆ ಎಂದು ಭಾವಿಸುತ್ತೇನೆ. ಇಲ್ಲಿಯ ಜನರು ಕೇವಲ ತಂದೆಯನ್ನು ಕಳೆದುಕೊಂಡಿಲ್ಲ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ನಾವೆಲ್ಲರೂ ಈ ಜನರ ಗೌರವ ಮತ್ತು ಪ್ರೀತಿಗೆ ಋಣಿಯಾಗಿದ್ದೇವೆ. ಇಡೀ ರಾಷ್ಟ್ರದ ಗಮನ ವಯನಾಡ್ ಕಡೆಗೆ ಇದೆ” ಎಂದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ “ನಾವು ಇಡೀ ದಿನವನ್ನು ಸಂಕಷ್ಟ ಅನುಭವಿಸಿದ ಜನರನ್ನು ಭೇಟಿ ಮಾಡಿದ್ದೇವೆ. ಇದು ಒಂದು ಘೋರ ದುರಂತ, ಜನರು ಅನುಭವಿಸುತ್ತಿರುವ ನೋವನ್ನು ನಾವು ಊಹಿಸಬಹುದು. ನಾವು ಸಂಪೂರ್ಣ ನೆರವು ನೀಡುತ್ತೇವೆ. ಹಿಮಾಚಲ ಪ್ರದೇಶದಲ್ಲಿ ದೊಡ್ಡ ದುರಂತ ಸಂಭವಿಸಿದೆ, ವಿಶೇಷವಾಗಿ ಈಗ ಉಳಿದಿರುವರಿಗೆ ನಾವು ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸುತ್ತೇವೆ’ ಎಂದರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಆಸ್ಪತ್ರೆ ಮತ್ತು ಇಲ್ಲಿನ ಸೇಂಟ್ ಜೋಸೆಫ್ ಶಾಲೆಯಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ, ಭೂಕುಸಿತದಿಂದ ಗಾಯಗೊಂಡವರನ್ನು ಭೇಟಿ ಮಾಡಿದರು.