Advertisement
ನಾನು ಒಂದು ನಿಲುವು ತೆಗೆದುಕೊಂಡಿದ್ದು, ನಾನು ಕಾಂಗ್ರೆಸ್ ನಲ್ಲಿ 28 ವರ್ಷ ಸಂಸದನಾಗಿದ್ದೇನೆ.ಐವತ್ತು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಇದ್ದೇನೆ. ಬಹಳಷ್ಟು ಜನ ಮುಖಂಡರು ನನ್ನ ಭೇಟಿ ಮಾಡಿದರು.ನಾನು ಕಾಂಗ್ರೆಸ್ ನಿಷ್ಠಾವಂತ, ಕೆಲವರು ಪಕ್ಷ ಬಿಟ್ಟು ಹೋಗಿ ವಾಪಸ್ಸು ಬಂದಿದ್ದಾರೆ, ನಾರಾಯಣಸ್ವಾಮಿ, ನಂಜೆಗೌಡ, ಬೇರೆ ಕಡೆಯಿಂದ ಪಕ್ಷಕ್ಕೆ ಬಂದಿದ್ದಾರೆ, ರಮೇಶ್ ಕುಮಾರ್ ಕೂಡ ಬೇರೆ ಕಡೆಯಿಂದ ಬಂದಿದ್ದಾರೆಅವರನ್ನು ಸೇರಿಸಿಕೊಳ್ಳುವ ಸಂದರ್ಭದಲ್ಲಿ ನನ್ನನ್ನು ಕೇಳಿ ಸೇರಿಸಿಕೊಂಡರು.ನಾನು ಆಗ ಸಂಸದನಾಗಿದ್ದೆ, ಕೊತ್ತನೂರು ಮಂಜುನಾಥ ಸೇರಿಸಿಕೊಳ್ಳುವ ಸಂಬಂಧ ನನ್ನ ಕೇಳಿ ಅಂದಿದ್ದೆ,ಆದರೆ ನನಗೆ ಹೇಳದೆ ಕೇಳದೆ ಈಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸೌಜನ್ಯಕ್ಕಾದರು ನನ್ನನ್ನು ಕೆಳಬೇಕಿತ್ತು. ಇವರೆಲ್ಲ ಪಕ್ಷ ಬಿಟ್ಟು ಹೋಗಿ ಮತ್ತೆ ಬಂದಿದ್ದಾರೆ. ಇವರಿಂದ ಕಾಂಗ್ರೆಸ್ ಕೋಲಾರದಲ್ಲಿ ಗೆಲ್ಲುತ್ತದೋ? ಬರುತ್ತದೆ ಅನ್ನೋದಾದರೆ ನನ್ನ ಅಭ್ಯಂತರ ಏನೂ ಇಲ್ಲ ಎಂದರು.
ತಾಲೂಕು ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ ಎಂದರು. ರಮೇಶ್ ಕುಮಾರ್ ಒಬ್ಬ ಶಕುನಿ. ಜನರು ಇದ್ದಾರೆ, ಧರ್ಮವೂ ಇದೆ. ಇದೆಲ್ಲದಕ್ಕೂ ಕಾಲ ಬರಲಿದೆ. ಅವರು ಏಕಪಾತ್ರ ಅಭಿನಯ ಮಾಡುತ್ತಾರೆ.ಎಲ್ಲಾ ಪಾತ್ರಗಳನ್ನೂ ಅವರೇ ಮಾಡುತ್ತಾರೆ. ಸಿದ್ದರಾಮಯ್ಯಗೆ ಅವರ ಮೇಲೆ ಯಾಕೆ ವಿಶ್ವಾಸ ಇದೆಯೋ ಗೊತ್ತಿಲ್ಲ. ಇದನ್ನ ಅವರನ್ನೇ ಕೇಳಬೇಕು. ಬಿಜೆಪಿಗೆ ಹೋಗಿ ಕಾಂಗ್ರೆಸ್ ಗೆ ಬರುತ್ತಾರೆ. ಇವರಿಗೆ ಮಾನ ಮರ್ಯಾದೆ ಇಲ್ಲ. ಯಾಕೆ ಕಾಂಗ್ರೆಸ್ ಗೆ ಬಂದಿದ್ದಾರೆ. ರಾಹುಲ್ ಗಾಂಧಿಯವರಿಗೆ ಸತ್ಯವನ್ನ ಮುಚ್ಚಿಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ದೇವೇಗೌಡ ಮೇಲೆ ಪೂಜ್ಯ ಭಾವನೆ ಇದೆ. ಆದರೆ ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಉಳಿಯುತ್ತೇನೆ ಎಂದರು.
Related Articles
Advertisement