Advertisement
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರದಲ್ಲಿ ಮಾತ್ರ ಬಿಜೆಪಿ ಇತರೆ ಪಕ್ಷಕ್ಕಿಂತ ವಿಭಿನ್ನ. ಸಮಾಜದ ಶಾಂತಿ ಹಾಳು ಮಾಡಿ, ಜಾತಿ ಜಾತಿ ಎತ್ತಿಕಟ್ಟಿ ಗೊಂದಲ ಸೃಷ್ಟಿ ಮಾಡಿ, ಮತ ಪಡೆಯಲು ಏನು ತಂತ್ರಬೇಕು ಅದನ್ನು ಬಿಜೆಪಿ ಮಾಡುತ್ತದೆ. ಮುಸ್ಲಿಂ, ದಲಿತರನ್ನು ಹೊರಗಿಟ್ಟು, ಹಿಂದು ಧರ್ಮ ಬೆಳೆಸುತ್ತೇವೆ ಎಂದು ಹೇಳಿಕೊಂಡು ಹಿಂದುತ್ವ ಬೆಳೆಸುವ ಹುನ್ನಾರ ನಡೆಸಿದ್ದಾರೆ. ಜೊತೆಗೆ ಹಂತವಾಗಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
Related Articles
Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದ ಗುಣ ಇಲ್ಲ. ಯಡಿಯೂರಪ್ಪ ನಿವೃತ್ತರಾಗಿದ್ದಾರೆ. ಶೆಟ್ಟರ್, ಸವದಿ ಕಾಂಗ್ರೆಸ್ ಸೇರಿಸಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಯಾರ ನಾಯಕತ್ವಕ್ಕೆ ಜನ ಬೆಂಬಲ ಕೊಡುತ್ತಾರೆ. ಚುನಾವಣೆ ಸಲುವಾಗಿ ಪ್ರಧಾನಿ ಮೋದಿ ರಾಜ್ಯಕ್ಕೆ ಇಷ್ಟು ಸಮಯ ಬರುತ್ತಿರುವುದು ಆಶ್ಚರ್ಯ ತಂದಿದೆ. ಡಬಲ್ ಎಂಜಿನ್ ಸರಕಾರ ಎನ್ನುತ್ತಾರೆ. ಆದರೆ, ಅಧಿಕಾರ ಕೇಂದ್ರದಲ್ಲೇ ಕೇಂದ್ರಿಕೃತವಾಗಿದೆ. ರಾಜ್ಯಕ್ಕೆ ಜಿಎಸ್ಟಿ ಪಾಲು ಕಡಿಮೆ ಸಿಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕಿತ್ತು ಹಾಕಿದರೆ ನಾಲ್ಕೈದು ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರೆಸ್ ಪಕ್ಷವೊಂದೇ ಪ್ರಜಾಪ್ರಭುತ್ವ ಉಳಿವು ಮತ್ತು ಸಂವಿಧಾನ ಅಡಿಯಲ್ಲಿ ಕೆಲಸ ಮಾಡುತ್ತದೆ. ದಲಿತ ವರ್ಗಕ್ಕೆ ಸೇರಿದದವರನ್ನು ಎತ್ತಿಕಟ್ಟಲಾಗುತ್ತಿರುವ ಕಾರಣ, ನಿಜವಾದ ದಲಿತರು ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯರಾದ ಬಿ.ಕೆ.ಬೊಮ್ಮಯ್ಯ, ಹಂಗಳ ನಾಗರಾಜು, ಮುಖಂಡರಾದ ಸಿ.ನಂಜುಂಡಸ್ವಾಮಿ, ಸೋಮಹಳ್ಳಿ ರವಿ, ಲಕ್ಕೂರು ಗಿರೀಶ್ ಇತರರು ಹಾಜರಿದ್ದರು.