Advertisement

ಡಿಕೆಶಿ ಕೈತಪ್ಪಿದ ಇಂಧನ; ಕಾಂಗ್ರೆಸ್ ಹಾಗೂ JDS ಗೆ ಯಾವ್ಯಾವ ಖಾತೆ?

05:18 PM Jun 01, 2018 | Team Udayavani |

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸಂಪುಟದ ಖಾತೆ ಹಂಚಿಕೆ ಕೊನೆಗೂ ಅಂತ್ಯಗೊಂಡಿದ್ದು, ಭಾರೀ ಲಾಬಿ ನಡೆಸಿದ ನಂತರವೂ ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಗೆ ಇಂಧನ ಖಾತೆ ಕೈತಪ್ಪಿದೆ.

Advertisement

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಿಎಂ ಎಚ್ ಡಿ ಕುಮಾರ್ ಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಾದ ಖಾತೆಗಳ ವಿವರ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಹಂಚಿಕೆಯಾದ ಖಾತೆಗಳು:

ಗೃಹ, ಜಲಸಂಪನ್ಮೂಲ, ಕೈಗಾರಿಕೆ ಮತ್ತು ಸಕ್ಕರೆ ಇಲಾಖೆ, ನೀರಾವರಿ, ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ವಿಜ್ಞಾನ ಮತ್ತು ತಂತ್ರಜ್ಞಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಅರಣ್ಯ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ. ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ,  ಬಂದರು, ಒಳನಾಡು ಸಾರಿಗೆ ಇಲಾಖೆ,

ಜೆಡಿಎಸ್ ಪಕ್ಷಕ್ಕೆ ಹಂಚಿಕೆಯಾದ ಖಾತೆಗಳು:

Advertisement

ಹಣಕಾಸು, ಲೋಕೋಪಯೋಗಿ, ಇಂಧನ, ಉನ್ನತ ಮತ್ತು ಪ್ರಾಥಮಿಕ ಶಿಕ್ಷಣ, ಸಣ್ಣ ಕೈಗಾರಿಕೆ, ಸಾರಿಗೆ, ಯೋಜನೆ ಮತ್ತು ಸಾಂಖ್ಯಿಕ, ಸಣ್ಣ ನೀರಾವರಿ, ಗುಪ್ತಚರ, ಮಾಹಿತಿ ಮತ್ತು ತಂತ್ರಜ್ಞಾನ,  ಸಹಕಾರ-ಪ್ರವಾಸೋದ್ಯಮ, ತೋಟಗಾರಿಕೆ ಮತ್ತು ರೇಷ್ಮೆ.

ಬುಧವಾರ ಮಧ್ಯಾಹ್ನ ಪ್ರಮಾಣವಚನ:

ಎರಡೂ ಪಕ್ಷಗಳ ನಿರ್ಧಾರದಂತೆ ಬುಧವಾರ ಮಧ್ಯಾಹ್ನ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಟ್ಟು 22 ಖಾತೆಗಳು ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಜೆಡಿಎಸ್ ಗೆ 12 ಖಾತೆಗಳು ಸಿಕ್ಕಿವೆ.

Advertisement

Udayavani is now on Telegram. Click here to join our channel and stay updated with the latest news.

Next