ಯೂರಪ್ಪ, ಸಿ.ಟಿ.ರವಿ ಹಿಂದೆ ಏನೇನು ಮಾತನಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
Advertisement
ಕೆಜೆಪಿ ಸ್ಥಾಪಿಸಿದಾಗ ನನ್ನ ಶವವೂ ಬಿಜೆಪಿ ಬಾಗಿಲಿಗೆ ಹೋಗುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ, ಮುಂದೆ ಎಲ್ಲಿಗೆ ಹೋದರು. ಇದೇ ಸಿ.ಟಿ.ರವಿ ಬಗ್ಗೆ ಯಡಿಯೂರಪ್ಪ ಏನೆಲ್ಲಾ ಮಾತನಾಡಿದ್ದರು. ಅದಕ್ಕೆ ಸಿ.ಟಿ.ರವಿ ಹೇಗೆ ಪ್ರತಿಕ್ರಿಯಿಸಿದ್ದರು ಎಂದು ಲೇವಡಿ ಮಾಡಿದರು. ಬೆಂಗಳೂರು ಪ್ರಸ್‌ಕ್ಲಬ್ ಹಾಗೂ ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಜಗದೀಶ್ ಶೆಟ್ಟರ್, ಸದಾನಂದಗೌಡರು ನೀಡಿದ್ದ ಹೇಳಿಕೆಗಳನ್ನು ಒಮ್ಮೆ ಸ್ಮರಿಸಿಕೊಳ್ಳಲಿ. ಚುನಾವಣೆ ಸಂದರ್ಭಗಳಲ್ಲಿ ಪರಿಸ್ಥಿತಿಯ ಆಧಾರದ ಮೇಲೆ ಕೆಲವೊಂದು ಹೇಳಿಕೆ ನೀಡಿರುತ್ತೇವೆ. ಆದರೆ, ರಾಷ್ಟ್ರ ಹಾಗೂ ರಾಜ್ಯದ ಹಿತಾಸಕ್ತಿಯಿಂದ ಕೆಲವೊಮ್ಮೆ ವೈಯಕ್ತಿಕ ಕಹಿ ಮರೆತು ಕೆಲಸ ಮಾಡಬೇ ಕಾಗುತ್ತದೆ. ದೇವೇಗೌಡರು-ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಗ್ಗೆ ಬಿಜೆಪಿ ನಾಯಕರು ಲಘುವಾಗಿ ಮಾತನಾಡುತ್ತಿದ್ದಾರೆ. ಆದರೆ, ಅವರು ಹಿಂದೆ ಏನು ಮಾಡಿದ್ದರು ಎಂಬುದನ್ನು ಮರೆತು ಹೋಗಿದ್ದಾರೆ ಎಂದು ಟೀಕಿಸಿದರು.
ವರ್ಚಸ್ಸು ಈಗ ಇಲ್ಲ. ಲೋಕಸಭೆ ಚುನಾವಣೆ ನಂತರ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಅದು
ಕರ್ನಾಟಕದಿಂದಲೇ ಪ್ರಾರಂಭವಾಗಲಿದೆ. ಹಿಂದೆ ರಾಷ್ಟ್ರದಲ್ಲಿ ನಡೆದ ರಾಜಕೀಯ ವಿದ್ಯಮಾನಗಳಿಗೆ ಕರ್ನಾಟಕವೇ ಸಾಕ್ಷಿಯಾ ಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಈ ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎಂದು ಕನಸು ಕಾಣುವುದನ್ನು ಬಿಜೆಪಿಯವರು ಬಿಟ್ಟಿಲ್ಲ. ಆದರೆ, ಸರ್ಕಾರ ದಿನೇ ದಿನೇ ಮತ್ತಷ್ಟು ಗಟ್ಟಿಯಾಗುತ್ತಲೇ ಇದೆ ಎಂದರು. ಕಾಂಗ್ರೆಸ್ ನಾಯಕರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದ್ದಾರೆ. ಆ ಪಕ್ಷದ ಶಾಸಕರು ಬೆಂಬಲ ನೀಡಿದ್ದಾರೆ.
ದೇವರ ದಯೆಯಿಂದ ನಾನು ಮುಖ್ಯ ಮಂತ್ರಿಯಾಗಿದ್ದೇನೆ. ಎಷ್ಟು ದಿನ ಇರಬೇಕು ಎಂಬುದನ್ನೂ ದೇವರು ನಿರ್ಧರಿಸಿದ್ದಾನೆ. ಹೀಗಾಗಿ, ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಎಂದು ಹೇಳಿದರು.
Related Articles
ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಆದರೆ, ನಾನು ಮೆರಿಟ್‌ಗೆ ಆದ್ಯತೆ ನೀಡಿದ್ದೇನೆ. ಪೇಮೆಂಟ್ ಕೋಟಾ ನನ್ನ ಕಚೇರಿಯಲ್ಲಿ ಇಲ್ಲವೇ ಇಲ್ಲ. ಎಸಿಬಿ ಅಧಿಕಾರಿಗಳಿಗೂ ನಾನು ಮುಕ್ತವಾಗಿ ಕೆಲಸ ಮಾಡಲು ಹೇಳಿದ್ದೇನೆ. ಯಾರ ಮೇಲೂ ವೈಯಕ್ತಿಕ ದ್ವೇಷ ಸಾಧಿಸುತ್ತಿಲ್ಲ. ಒಬ್ಬ ಅಧಿಕಾರಿ ಮನೆಯಲ್ಲಿ 18 ಕೆಜಿ ಚಿನ್ನ ಸಿಗುತ್ತದೆ ಎಂದರೆ ರಾಜ್ಯದ ಸಂಪತ್ತು ಎಲ್ಲಿಲ್ಲಿದೆ ಎಂಬುದು ಗೊತ್ತಾಗುತ್ತದೆ ಎಂದು ಸೂಕ್ಷ್ಮವಾಗಿ ಕುಮಾರಸ್ವಾಮಿ ನುಡಿದರು.
Advertisement