Advertisement

ಕಾಂಗ್ರೆಸ್‌ನಿಂದ “ಜಲರಕ್ಷಾ ದೀಪ ಸಂಗಮ’

02:25 PM Mar 17, 2017 | |

ಕಾಸರಗೋಡು: ನೈಸರ್ಗಿಕ ಸಂಪತ್ತು, ಜೀವಸಂಕುಲಗಳನ್ನು ಉಳಿಸಿ ಬೆಳೆಸುವ ಹೊಣೆ ಮನುಷ್ಯನ ಆದ್ಯ ಕರ್ತವ್ಯವಾಗಬೇಕು. ಪ್ರಕೃತಿ ನಾಶದ ಗಂಭೀರ ಸಮಸ್ಯೆ ಪರಿಹಾರಕ್ಕೆ ಗಂಭೀರ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತಾರದಿದ್ದಲ್ಲಿ ವ್ಯಾಪಕ ಜೀವಹಾನಿ, ಪ್ರಾಕೃತಿಕ ಅಸಮತೋಲನ ಗಳುಂಟಾಗಿ ಭೀತಿಯ ಭವಿಷ್ಯ ನಿರ್ಮಾಣವಾಗುವುದು ಎಂದು ಕರ್ನಾಟಕದ ಆಹಾರ ಪೂರೈಕಾ ಸಚಿವ ಯು.ಟಿ.ಖಾದರ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಪಯಸ್ವಿನಿ ಹೊಳೆಯಲ್ಲಿ ಆಯೋಜಿಸಲಾದ “ಜಲರಕ್ಷಾ ದೀಪ ಸಂಗಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಇತ್ತೀಚೆಗೆ ಬೊಟ್ಟು ಮಾಡಿರುವ ಮಹತ್ವದ ಅಂಶಗಳನ್ನು ಗಮನದಲ್ಲಿರಿಸಿ ಸಮಗ್ರ ನಾಗರಿಕ ಜಾಗೃತಿ ಮತ್ತು ಸಹಭಾಗಿತ್ವದೊಂದಿಗೆ ಸಮರೋಪಾದಿಯ ಕಾರ್ಯಯೋಜನೆಯನ್ನು ಜಾರಿಗೆ ತರಬೇಕೆಂದು ತಿಳಿಸಿದ ಅವರು, ಕಾಂಗ್ರೆಸ್‌ ಪಕ್ಷ ರಾಷ್ಟ್ರ ವ್ಯಾಪಿಯಾಗಿ ಮುಂದಿನ ದಿನಗಳಲ್ಲಿ ತಳಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತ ಇರುವ ಕಾರಣ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಮಂಗಳೂರಿಗೆ ಭೇಟಿ ನೀಡಲು ಸಾಧ್ಯವಾಗಿದೆ. ಇದು ಕಾಂಗ್ರೆಸ್‌ನ ನೀತಿಯಾಗಿದೆ. ಆದರೆ ಕೇರಳ ಮುಖ್ಯಮಂತ್ರಿಯಾಗಿದ್ದ ಉಮ್ಮನ್‌ ಚಾಂಡಿ ಅವರಿಗೆ ಸಂಚಾರ ಸ್ವಾತಂತ್ರÂವನ್ನು ನಿಷೇಧಿಸಿದ ಸಿಪಿಎಂ ಪಕ್ಷ  ಇನ್ನಾದರೂ ಇದನ್ನು ಅರ್ಥ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಕ್ಷೀಣಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲೇ ಕಾಂಗ್ರೆಸ್‌ ಪ್ರಬಲ ಪಕ್ಷವಾಗಿ ಹೊರಬರಲಿರುವುದಾಗಿ ಅವರು ಭವಿಷ್ಯ ನುಡಿದರು.ಹೊಳೆಯನ್ನು ಸಾಕ್ಷಿಯಾಗಿಸಿಕೊಂಡು ಕಾರ್ಯಕ ರ್ತರು ಪ್ರಕೃತಿ ಶೋಷಣೆಯ ವಿರುದ್ಧ ಪ್ರಕೃತಿಯನ್ನು ಸಂರಕ್ಷಿಸಲು ಪ್ರತಿಜ್ಞೆ ಸ್ವೀಕರಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಕೀಂ ಕುನ್ನಿಲ್‌ ಅಧ್ಯಕ್ಷತೆ ವಹಿಸಿದರು. ಎನ್‌. ಮಹೇಂದ್ರ ಪ್ರತಾಪ್‌ ಪ್ರತಿಜ್ಞೆ ಹೇಳಿ ಕೊಟ್ಟರು. ಸಿ.ಪಿ. ಕೃಷ್ಣನ್‌, ಕರಿಂಬಿಲ್‌ ಕೃಷ್ಣನ್‌, ಪಿ.ಕೆ. ಫೆ„ಸಲ್‌, ಕೆ.ಕೆ. ರಾಜೇಂದ್ರನ್‌, ಕೇಶವ ಪ್ರಸಾದ ನಾಣಿತ್ತಿಲು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next