Advertisement

ಮತಯಂತ್ರ: ಕಾಂಗ್ರೆಸ್‌ ಅಪಸ್ವರ

06:00 AM Mar 18, 2018 | Team Udayavani |

ಹೊಸದಿಲ್ಲಿ: ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಕಾಂಗ್ರೆಸ್‌ ಅಧಿವೇಶನದಲ್ಲೂ ಅಪಸ್ವರ ಕೇಳಿಬಂತು.”ಮುಂದಿನ ದಿನಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು ಬೇಡವೇ ಬೇಡ. ಅದರ ಬದಲಾಗಿ ಮತ ಪತ್ರದ ವಿಧಾನವನ್ನು ಪುನಃ 
ಜಾರಿಗೊಳಿಸಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ. ಈ ಮೂಲಕ ಮತ್ತೆ ಇವಿಎಂ “ರಾಗ’ಕ್ಕೆ ಕಾಂಗ್ರೆಸ್‌ ಅಂಟಿ ಕೊಳ್ಳುತ್ತಿರುವುದು ಸ್ಪಷ್ಟ. ಜತೆಗೆ ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ಬಾರಿ ಚುನಾವಣೆ ನಡೆಸುವ ಬಿಜೆಪಿ ಪ್ರಸ್ತಾವ ವನ್ನೂ ವಿರೋಧಿಸುವುದಾಗಿ ಹೇಳಿದ್ದಾರೆ.

Advertisement

“ಇವೆಲ್ಲದರ ಸಾಧಕ-ಬಾಧಕಗಳನ್ನು ಅರಿತು ತೀರ್ಮಾನ ಕೈಗೊಳ್ಳಬೇಕು. ಇದರಿಂದ ಹಲವು ರೀತಿಯ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಎರಡೂ ವಿಚಾರಗಳಿಗೆ ಗೊತ್ತುವಳಿ ಅಂಗೀಕರಿಸಲಾಗಿದೆ. ಧರ್ಮ ಮತ್ತು ರಾಜಕೀಯವನ್ನು ಮಿಶ್ರಗೊಳಿಸಬಾರದು. ಆರೆಸ್ಸೆಸ್‌ ಮತ್ತು ಬಿಜೆಪಿ ಜನರ ಭಾವನೆ ಗಳನ್ನು ಕೆರಳಿಸಲು ಧರ್ಮವನ್ನು ಬಳಸಿ ಕೊಳ್ಳುತ್ತಿವೆ’ ಎಂದಿದ್ದಾರೆ. ಧರ್ಮವನ್ನು ರಾಜಕೀಯಕ್ಕಾಗಿ ಬಳಸುತ್ತಿದೆ ಎಂದು ಗೊತ್ತುವಳಿಯಲ್ಲಿ ಆರೋಪಿಸಲಾಗಿದೆ ಎನ್ನುವ ಬಗ್ಗೆಯೂ ಈ ವೇಳೆ ಮಾಹಿತಿ ನೀಡಿದರು.

“ಮೋದಿ ನೇತೃತ್ವದ ಸರಕಾರದಿಂದ ದೇಶ ಬಳಲಿದೆ. ಭಾರತವನ್ನು ರಕ್ಷಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್‌ನ ಕೈ ಚಿಹ್ನೆ ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯ ಬಹುದು’ ಎಂದು ರಾಹುಲ್‌  ಹೇಳಿದ್ದಾರೆ. ದಿಲ್ಲಿಯಲ್ಲಿ ಶುಕ್ರವಾರ ಪಕ್ಷದ ಅಧಿ ವೇಶನದಲ್ಲಿ ಅವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next