Advertisement

ಮೆಸ್ಕಾಂ ಕ್ರಮಕ್ಕೆ ಕಾಂಗ್ರೆಸ್‌ ಆಕ್ರೋಶ

08:00 AM Mar 17, 2019 | |

ಸಾಗರ: ತಾಲೂಕಿನ ಗ್ರಾಮೀಣ ಭಾಗದ ರೈತರು ಮತ್ತು ವಿದ್ಯಾರ್ಥಿಗಳ ಸ್ಥಿತಿ ವಿದ್ಯುತ್‌ ಇಲ್ಲದೆ ಅತ್ಯಂತ ಶೋಚನೀಯವಾಗಿದೆ. ಮುಂದಿನ ಎಂಟು ದಿನಗಳೊಳಗೆ ಸರ್ಕಾರ ನಿಗದಿಪಡಿಸಿದ ವಿದ್ಯುತ್‌ ನೀಡದೆ ಹೋದಲ್ಲಿ ಮೆಸ್ಕಾಂ ಕಚೇರಿ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದರು.

Advertisement

ಸಮರ್ಪಕ ವಿದ್ಯುತ್‌ ಪೂರೈಕೆಗೆ ಒತ್ತಾಯಿಸಿ ಕಾಂಗ್ರೆಸ್‌ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ 7 ಗಂಟೆ ತ್ರೀಫೇಸ್‌ ವಿದ್ಯುತ್‌ ನೀಡಬೇಕು ಎನ್ನುವ ಕಾಯ್ದೆ ಜಾರಿಗೆ ತಂದಿದೆ. ಆದರೆ ಮೆಸ್ಕಾಂ ತಾಲೂಕಿನ ಕಸಬಾ, ಭಾರಂಗಿ, ಆನಂದಪುರ, ಆವಿನಹಳ್ಳಿ ಸೇರಿದಂತೆ ಎಲ್ಲ ಭಾಗಗಳಿಗೂ ಕನಿಷ್ಟ ಎರಡು ಗಂಟೆ ವಿದ್ಯುತ್‌ ನೀಡುತ್ತಿಲ್ಲ. ರೈತರು ಪಂಪ್‌ಸೆಟ್‌ ನಂಬಿಕೊಂಡು ಬೆಳೆ ಬೆಳೆದಿದ್ದು, ವಿದ್ಯುತ್‌ ಸಮಸ್ಯೆಯಿಂದಾಗಿ ಬೆಳೆಗಳಿಗೆ ನೀರು ಹಾಯಿಸಲಾಗದೆ ಅದು ಒಣಗಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿದೆ. ವಿದ್ಯಾರ್ಥಿಗಳು ರಾತ್ರಿ ಹೊತ್ತು ಕುಳಿತುಕೊಂಡು ಓದಲು ಮೆಸ್ಕಾಂ ಶಾಪವಾಗಿ ಪರಿಣಮಿಸಿದ್ದು, ವಿದ್ಯುತ್‌ ಅಸಮರ್ಪಕತೆಯಿಂದ ವಿದ್ಯಾರ್ಥಿಗಳು ಓದಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಸಮರ್ಪಕ ವಿದ್ಯುತ್‌ ನೀಡಲು ಮನವಿ ಮಾಡಿದ್ದರೂ ಅವರು ಕೇಳುವ ಸ್ಥಿತಿಯಲ್ಲಿ ಇಲ್ಲ. ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟರೆ ಮೆಸ್ಕಾಂ ವಿದ್ಯುತ್‌ ನೀತಿ ವಿರುದ್ಧ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರಮುಖರಾದ ಜಿ.ಕೆ. ಭೈರಪ್ಪ, ಎನ್‌. ಲಲಿತಮ್ಮ, ಆನಂದ ಭೀಮನೇರಿ, ರವಿ ಜಂಬಗಾರು ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next