Advertisement

ಸಿದ್ದರಾಮಯ್ಯ ಕಪಿಮುಷ್ಠಿಯಲ್ಲಿ ಕಾಂಗ್ರೆಸ್‌: ರಮೇಶ್‌ ವಾಗ್ಧಾಳಿ

11:17 PM Sep 28, 2019 | Lakshmi GovindaRaju |

ಬೆಳಗಾವಿ: ಒಬ್ಬರ ಕಪಿಮುಷ್ಠಿಯಲ್ಲಿಯೇ ಕಾಂಗ್ರೆಸ್‌ ಇದ್ದರೆ ಅವನತಿ ಖಚಿತ. ಇದು ಹೀಗೆಯೇ ಮುಂದು ವರಿದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 30 ಶಾಸಕರೂ ಆಯ್ಕೆ ಆಗುವುದಿಲ್ಲ ಎಂದು ಗೋಕಾಕ್‌ನ ಅನರ್ಹ ಶಾಸಕ ರಮೇಶ ಜಾರಕಿ ಹೊಳಿ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್‌ಗೆ ವಲಸೆ ಬಂದಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಪಕ್ಷ ನಿರ್ನಾಮ ಮಾಡಲು ಹೊರಟಿದ್ದಾರೆ. ಅವರಿಗಿಂತ 20 ವರ್ಷ ಮುಂಚೆ ಪಕ್ಷದಲ್ಲಿದ್ದುಕೊಂಡು ಬೆಳೆಸಿದ್ದೇವೆ. ಈಗ ಬಂದವರಿಂದ ಪಕ್ಷ ಬೆಳವಣಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.

ನಾಯಕರೆನಿಸಿಕೊಂಡವರಿಗೆ ನಾಯಕತ್ವ ಗುಣ ಇರಬೇಕು. ಕಾಂಗ್ರೆಸ್‌ನಲ್ಲಿ ಭಿನ್ನಮತ ಇದ್ದಾಗ ಒಂದೇ ಒಂದು ದಿನ ಸಿದ್ದರಾಮಯ್ಯ ನಮಗೆ ಹಿರಿಯರಾಗಿ ತಿಳಿ ಹೇಳಿಲ್ಲ. ಒಂದು ಮಾತು ಅವರು ಹೇಳಿದ್ದರೆ ಈಗಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸವಾಲು ಹಾಕಿದರು. ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕ ರಿಂದಲೇ ದೋಸ್ತಿ ಸರ್ಕಾರ ಪತನವಾಗಿದೆ. ಸರ್ಕಾರ ಬೀಳಿಸಿದ್ದು ನಾವಲ್ಲ ಎಂದು ಸ್ಪಷ್ಟಪಡಿಸಿದರು.

ವೇಣುಗೋಪಾಲ ಬೇಕಾರ್‌: ವೇಣು ಗೋಪಾಲ ಅಂತಹ ಬೇಕಾರ್‌ (ಕೆಲಸಕ್ಕೆ ಬಾರದವರು) ಮನುಷ್ಯ ಯಾರೂ ಇಲ್ಲ. ಮಾಣಿಕ ಠಾಕೂರ್‌ ಅವರಿಗೆ ಉಸ್ತುವಾರಿ ಕೊಟ್ಟಿದ್ದರೆ ಪಕ್ಷ ಇನ್ನಷ್ಟು ಬೆಳೆಯುತ್ತಿತ್ತು. ವೇಣುಗೋಪಾಲಗೆ ಉಸ್ತುವಾರಿ ಕೊಟ್ಟಿದ್ದರಿಂದ ಪಕ್ಷ ಹಾಳಾಗಿ ಹೋಗುತ್ತಿದೆ ಎಂದು ಆಪಾದಿಸಿದರು. ಸುಪ್ರೀಂ ತೀರ್ಪಿಗಾಗಿ ಕಾಯುತ್ತಿದ್ದೇವೆ. ಯಾವಾಗ ಚುನಾವಣೆ ನಡೆದರೂ ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next