Advertisement
ಬಿಜೆಪಿ ಹಳೇ ಮೈಸೂರು ಭಾಗದ ಕಾಂಗ್ರೆಸ್ ನಾಯಕರನ್ನು ಗುರಿಯಾಗಿರಿಸಿಕೊಂಡಿದ್ದು, ಮಾಜಿ ಸಂಸದ ಮುದ್ದಹನುಮೇಗೌಡ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಹಾಗೂ ಮೈಸೂರು ಭಾಗದವರನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಪಡೆದಿರುವ ಹೈಕಮಾಂಡ್, ಸ್ವಸಾಮರ್ಥ್ಯ ಹಾಗೂ ಪ್ರಭಾವ ಇರುವವರು ಪಕ್ಷ ತ್ಯಜಿಸದಂತೆ ನೋಡಿಕೊಳ್ಳಲು ಸೂಚಿಸಿದೆ.
Related Articles
Advertisement
ಇದನ್ನೂ ಓದಿ:ಉಡುಪಿ: ಕೊಲ್ಲೂರು, ಶ್ರೀ ಕೃಷ್ಣ ಮಠಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಇತ್ತೀಚಿನ ವಿದ್ಯಮಾನಗಳ ನಂತರ ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಸಹ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಬರಲು ನಾಯಕರು ಉತ್ಸುಕರಾಗಿದ್ದರೆ ಇದೀಗ ಕಾಂಗ್ರೆಸ್‌ನಿಂದಲೇ ಬಿಜೆಪಿಗೆ ಹೋಗಲು ಒಳಗೊಳಗೆ ತಯಾರಿ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಗೆ ಕಾರಣ ಏನು ಎಂಬ ಬಗ್ಗೆ ಹೈಕಮಾಂಡ್ ಮಾಹಿತಿ ಸಂಗ್ರಹ ಮಾಡುತ್ತಿದೆ ಎಂದು ಹೇಳಲಾಗಿದೆ.
ಅಸಮಾಧಾನ: ಮತ್ತೂಂದೆಡೆ, ಬಣ ರಾಜಕಾರಣದಿಂದ ರಾಜ್ಯ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ಮಾಡುವಲ್ಲಿಯೂ ಹಿನ್ನಡೆಯಾಗುತ್ತಿದೆ. ಟಾರ್ಗೆಟ್ ಮಾಡಿ ಹೋರಾಟ ಮಾಡುವಂತಾಗಿದೆ. ಒಗ್ಗಟ್ಟಾಗಿ ಹೋರಾಟ ಮಾಡಿ, ಕಾರ್ಯಕ್ರಮ ನಡೆಸಿ ಎಂದರೂ ನಾನೊಂದು ತೀರ, ನೀನೊಂದು ತೀರಾ ಎಂಬಂತಾಗಿದೆ ಎಂಬ ದೂರು ಗಳು ಪದೇಪದೆ ಹೈಕಮಾಂಡ್ ತಲುಪುತ್ತಿವೆ. ಇದು ಸಹ ಕೈ ನಾಯಕರಿಗೆ ತಲೆಬಿಸಿಯಾಗಿದೆ ಎನ್ನಲಾಗಿದೆ
ಹೈಕಮಾಂಡ್ ಅಂಗಳ ತಲುಪಿದ ಟ್ವೀಟ್‌ವಾರ್: ಎಂ.ಬಿ.ಪಾಟೀಲ್ ಮನೆಗೆ ಸಚಿವ ಅಶ್ವತ್ಥನಾರಾಯಣ ಭೇಟಿ ಹೇಳಿಕೆ ನಂತರದಲ್ಲಿನ ಮಾಜಿ ಸಂಸದೆ ರಮ್ಯಾ ಮತ್ತು ಕಾಂಗ್ರೆಸ್ ಮುಖಂಡರ ನಡುವಿನ ಟ್ವೀಟ್ ವಾರ್ ವಿವಾದ ಸಹ ಹೈಕ ಮಾಂಡ್ ಅಂಗಳ ತಲುಪಿದೆ. ಅಂತಿಮವಾಗಿ ಇದು ಪಕ್ಷಕ್ಕೆ ಡ್ಯಾಮೆಜ್ ಆಗಲಿದೆ ಎಂದು ನಾಯಕರು ಆತಂಕ ವ್ಯಕ್ತಪಡಿಸಿದ್ದು, ಪ್ರಸಕ್ತ ವಿದ್ಯಮಾನ, ರಾಜ್ಯದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಉದಯಪುರದಲ್ಲಿ ನಡೆ ಯುತ್ತಿರುವ ಚಿಂತನ-ಮಂಥನ ಸಭೆಯ ನಡುವೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ನಡುವೆ ಮಾತುಕತೆಗೆ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವೇದಿಕೆ ಸಿದ್ಧಪಡಿಸಿದ್ದಾರೆ. ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ ಹೋಟೆಲ್‌ನಲ್ಲಿ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ್ ನಡುವೆ ರಾಜೀ ಸಂಧಾನ ಮಾಡಿಸಿದ್ದರು ಎಂದು ಮೂಲಗಳು ತಿಳಿಸಿವೆ . ಇದಕ್ಕೆ ರಮ್ಯಾ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಗುಡ್ ಜಾಬ್ ಎಂದಿದ್ದಾರೆ.
ಎಸ್.ಲಕ್ಷ್ಮಿನಾರಾಯಣ