Advertisement
ಮೂರೂ ವಿಷಯಗಳಲ್ಲಿ ರಾಷ್ಟ್ರಮಟ್ಟದ ಹೋರಾಟಕ್ಕೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಈಗ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ ನಾಯಕರೂ ಭಾಗಿಯಾಗಿರುವ ಆರೋಪ ಕೇಳಿಬಂದಿರುವ ಕಾರಣ, ಹೈಕಮಾಂಡ್ ಈ ಕುರಿತು ವಾಸ್ತವಾಂಶದ ವರದಿ ಕೇಳಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
Related Articles
Advertisement
ಹೈಕಮಾಂಡ್ ಅಸಮಾಧಾನಈ ಮಧ್ಯೆ ಪಿಎಸ್‌ಐ ಮತ್ತು ಪ್ರಾಧ್ಯಾಪಕರ ನೇಮಕಾತಿ ಅಕ್ರಮ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಪರಿಣಾಮಕಾರಿ ಹೋರಾಟ ಮಾಡುತ್ತಿಲ್ಲ. ಹೋರಾಟದಲ್ಲೂ “ಆಯ್ಕೆ’ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರು ಹೈಕಮಾಂಡ್ ತಲುಪಿದೆ. ಈಶ್ವರಪ್ಪ ವಿಚಾರದಲ್ಲಿ ನಡೆದ ಹೋರಾಟ ಇತರ ಸಚಿವರ ವಿರುದ್ಧ ಆರೋಪ ಕೇಳಿ ಬಂದಾಗ ನಡೆಯಲಿಲ್ಲ. ದಾಖಲೆಗಳಿದ್ದರೂ ಮೌನ ವಹಿಸಲಾಗಿದೆ ಎಂದು ಕೆಲವು ನಾಯಕರು ದೂರು ನೀಡಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂದು ತಿಳಿದು ಬಂದಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಟ ರೂಪಿಸುವಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಮ್ಮತದ ತೀರ್ಮಾನ ಕೈಗೊಳ್ಳುತ್ತಿಲ್ಲ. ಪ್ರತ್ಯೇಕ ಹೋರಾಟ ಮಾಡಲಾಗುತ್ತಿದೆ. ಒಂದೇ ವಿಚಾರ ವಾಗಿ ಭಿನ್ನ ಹೇಳಿಕೆ ನೀಡಲಾಗುತ್ತಿದೆ. ಇದ ರಿಂದ ಪಕ್ಷದ ನಿಲುವಿನ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಗೊಂದಲ ಮೂಡುವಂತಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ನಾಯಕರೊಬ್ಬರು ಹೇಳಿದ್ದಾರೆ. ದಿಲ್ಲಿಯಲ್ಲೇ ಹೋರಾಟದ ರೂಪುರೇಷೆ
ರಾಜ್ಯದ ವಿದ್ಯಮಾನಗಳ ಬಗ್ಗೆ ವರದಿ ಪಡೆದ ಅನಂತರ ದಿಲ್ಲಿಯಲ್ಲಿ ಪ್ರಮುಖರ ಸಭೆ ನಡೆಸಲು ಹೈಕಮಾಂಡ್ ತೀರ್ಮಾನಿಸಿದೆ. ಆ ಸಭೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ್ ಮತ್ತು ಕೆಪಿಸಿಸಿ ಕಾರ್ಯಾ ಧ್ಯಕ್ಷ ರಿಗೆ ಮಾತ್ರ ಆಹ್ವಾನ ಇರಲಿದೆ. ಆ ಸಭೆ ಯಲ್ಲಿ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ ವಾಗಲಿದೆ ಎಂದು ಮೂಲಗಳು ತಿಳಿಸಿವೆ. - ಎಸ್. ಲಕ್ಷ್ಮೀನಾರಾಯಣ