Advertisement

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

01:21 AM May 30, 2024 | Team Udayavani |

ಪುತ್ತೂರು: ರಾಜ್ಯದ ಕಾಂಗ್ರೆಸ್‌ ಸರಕಾರ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಚಟುವಟಿಕೆ ಯನ್ನು ಮಾಡಿಲ್ಲ. ಕೇವಲ ಗ್ಯಾರಂಟಿ ಭಜನೆಯನ್ನು ಬಿಟ್ಟರೆ ಇತರ ಯಾವುದೇ ಹೇಳಿಕೊಳ್ಳುವ ಕೆಲಸ ಮಾಡಿಲ್ಲ. ಸರಕಾರದ ವೈಫ‌ಲ್ಯಕ್ಕೆ ಸರಿಯಾಗಿ ಮತದಾರರು ಈ ಚುನಾವಣೆಯಲ್ಲಿ ಪಾಠ ಕಲಿಸುವರು ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ವಿಧಾನ ಪರಿಷತ್‌ ಎಂಬುದು ಚಿಂತಕರನ್ನು ಪ್ರತಿನಿಧಿಸುವ ಕ್ಷೇತ್ರ. ಚುನಾವಣ ಪೂರ್ವದಲ್ಲಿ ಅಂದರೆ 1907ರಲ್ಲಿಯೇ ಇದ್ದಂತಹ ವ್ಯವಸ್ಥೆಯಿದು. ಕಳೆದ ಒಂದು ಅವಧಿಯನ್ನು ಹೊರತು ಪಡಿಸಿ 1988ರಿಂದ ಈ ತನಕ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಮತದಾರರು ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಬಾರಿಯೂ ಬಿಜೆಪಿ ಹಾಗೂ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವರು ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ ಕಾರವು ಶಿಕ್ಷಣ ಮತ್ತು ಪದವೀಧರ ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೂ ವಿವೇಕ ಕೊಠಡಿಗಳಲ್ಲದೇ, 10 ಸರಕಾರಿ ಎಂಜಿನಿಯರಿಂಗ್‌ ಮತ್ತು 7 ಮೆಡಿಕಲ್‌ ಕಾಲೇಜುಗಳನ್ನು ಸ್ಥಾಪಿಸಿತ್ತು. ಆದರೆ ಈಗಿನ ಸರಕಾರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ ಬಿಡುಗಡೆ ಯಾದ ಶಾಸಕರ ಪ್ರದೇಶಾಭಿವೃದ್ಧಿಯ 2 ಕೋಟಿ ರೂ. ಅನುದಾನ ಇದುವರೆಗೆ ಸಿಕ್ಕಿಲ್ಲ ಎಂದರು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್‌ ರಾವ್‌, ವಿಧಾನ ಪರಿಷತ್‌ ಚುನಾವಣ ಸಹ ಸಂಚಾಲಕ ವಿಕಾಸ್‌ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next