Advertisement

ಹಿಂದುಳಿದವರಿಗೆ ರಾಜಕೀಯ ಬಲ ನೀಡಿದ್ದು ಕಾಂಗ್ರೆಸ್‌

06:05 PM Apr 16, 2019 | Lakshmi GovindaRaju |

ಕೊಳ್ಳೇಗಾಲ: ಉಪ್ಪಾರ ಸಮುದಾಯ ಸೇರಿದಂತೆ ಅತಿ ಹಿಂದುಳಿದ ಸಮಾಜಕ್ಕೆ ರಾಜಕೀಯ ಬಲ ತಂದುಕೊಟ್ಟಿರುವುದು ಕಾಂಗ್ರೆಸ್‌ ಮಾತ್ರ ಆಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹಿಂದುಳಿದ ಸಮುದಾಯದ ಮುಖಂಡರು ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.

Advertisement

ತಾಲೂಕಿನ ಕುಣಗಳ್ಳಿ ಉತ್ತಂಬಳ್ಳಿ, ಟಗರಪುರಮೋಳೆ ಕುಂತೂರುಮೋಳೆ ಗ್ರಾಮಗಳಲ್ಲಿ ಚಾಮರಾಜನಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತಿಕೂಟದ ಅಭ್ಯರ್ಥಿ ಹಾಗೂ ಸಂಸದ ಆರ್‌. ಧ್ರುವನಾರಾಯಣ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿ, ಹಿಂದುಳಿದ ಸಮುದಾಯದವರಿಗೆ ರಾಜಕೀಯ ಶಕ್ತಿ ನೀಡುವುದು ಕೇವಲ ಕಾಂಗ್ರೆಸ್ಸಿನಿಂದ ಮಾತ್ರ ಎಂದರು.

ಧ್ರುವ ಬೆಂಬಲಿಸಿ: ರಾಜ್ಯ ಮೈತಿಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನನಗೆ ಕಾಂಗ್ರೆಸ್ಸಿನಿಂದ ಟಿಕೆಟ್‌ ಕೊಡಿಸಿ ಎರಡನೇ ಬಾರಿ ಗೆಲ್ಲುವಂತೆ ಮಾಡಿದ್ದಾರೆ ಮತ್ತು ಜಿಲ್ಲಾ ಉಸ್ತುವಾರಿ ಸ್ಥಾನವನ್ನು ದೊರಕಿಸಿಕೊಟ್ಟಿದ್ದಾರೆ.

ರಾಜ್ಯದಲ್ಲಿ ನಾನೊಬ್ಬನೆ ಉಪ್ಪಾರ ಜನಾಂಗದ ಸಚಿವನಾಗಿದ್ದೇನೆ. ಉಪ್ಪಾರ ಜನಾಂಗಕ್ಕೆ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸ್ಥಾಪನೆ ಮಾಡಿದ್ದಾರೆ, ಇದೆಲ್ಲಾ ಸಣ್ಣ ಸಮುದಾಯಗಳನ್ನು ಮೇಲೆ ಎತ್ತುವ ಸಲುವಾಗಿ ಅವಕಾಶಗಳು ಬಂದಿದ್ದು, ಸಮಾಜಕ್ಕೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಬೇಕು ಎಂದರು.

ಸಮುದಾಯಕ್ಕೆ ಅನೇಕ ಕೊಡುಗೆ: ಈ ಹಿಂದೆ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿರನ್ನು ವಿಧಾನ ಪರಿಷತ್‌ ಸದಸ್ಯರಾಗಿ ನೇಮಕ ಮಾಡಲಾಗಿದೆ ಹಾಗೂ ಅದೇ ಗ್ರಾಮದ ಎ.ನಟರಾಜುರನ್ನು ಕರಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

Advertisement

ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಜವರೇಶೆಟ್ಟಿರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು. ಉಪ್ಪಾರ ನಿಗಮದ ಶಿವಕುಮಾರ್‌ರನ್ನು ಮಾಡಲಾಗಿತ್ತು. ಈ ರೀತಿ ಸಮಾಜವನ್ನು ಗುರುತಿಸಿ ಸಮಾಜವನ್ನು ಬಲ ಪಡಿಸುವ ಪ್ರಯತ್ನ ಮಾಡುತ್ತಿದ್ದು ಕಾಂಗ್ರೆಸ್‌ಗೆ ಮತ್ತಷ್ಟು ಬಲ ತುಂಬುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಎಣ್ಣೆಮಜ್ಜನ ಮಾಡಲು ಅವಕಾಶ: ಜಿಲ್ಲಾ ಕೇಂದ್ರದಲ್ಲಿ ಉಪ್ಪಾರ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಮೀನನ್ನು ಸರ್ಕಾರ ನೀಡಿದೆ 5 ಕೋಟಿ ಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೇ ರೀತಿ ಎರಡು ಬಾರಿ ಗೆದ್ದ ಸಂಸದ ಆರ್‌.ಧ್ರುವನಾರಾಯಣ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಉಪ್ಪಾರ ಅಭಿವೃದ್ಧಿಗೆ ನೀಡಿದ್ದಾರೆ

ಮತ್ತು ಉಪ್ಪಾರ ಸಮಾಜವನ್ನು ಎಸ್ಸಿ, ಎಸ್ಟಿ ಸೇರಿಸುವಂತೆ ನಿರಂತರ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿದೆ ಮತ್ತು ಮಲೆಮಹದೇಶ್ವರ ಬೆಟ್ಟದಲ್ಲಿ ಉಪ್ಪಾರ ಸಮಾಜದವರು ಎಣ್ಣೆಮಜ್ಜನ ಮಾಡಲು ಅವಕಾಶ ನೀಡಲಾಗಿದೆ. ಈಗ ಅನೇಕ ಅಭಿವೃದ್ಧಿಗೆ ಕೆಲಸಗಳಾಗಿದೆ ಎಂದರು.

ರಾಜ್ಯ ಉಪ್ಪಾರ ಅಧ್ಯಕ್ಷ ಶಿವಕುಮಾರ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಸಂಸದ ಆರ್‌.ಧ್ರುವನಾರಾಯಣ ಮೂರನೇ ಬಾರಿಗೆ ಹ್ಯಾಟ್ರಿಕ್‌ ಗೆಲುವು ತಂದು ಕೊಡಬೇಕೆಂದು ಪುಟ್ಟರಂಗಶೆಟ್ಟಿಗೆ ಜವಬ್ದಾರಿ ವಹಿಸಿದ್ದು ಸಮಾಜದ ಮುಖಂಡರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವು ತಂದುಕೊಡುವ ಮೂಲಕ ಸಚಿವರಿಗೆ ಶಕ್ತಿ ತುಂಬಬೇಕೆಂದು ಮುಖಂಡರಲ್ಲಿ ಮನವಿ ಮಾಡಿದರು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ನಾಗರಾಜು, ಕೆಪಿಸಿಸಿ ಸದಸ್ಯ ಸೋಮಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತೋಟೇಶ್‌, ಟಗರಪುರ ಗ್ರಾಪಂ ಅಧ್ಯಕ್ಷ ನಿಂಗರಾಜು, ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜೇಂದ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next