Advertisement

ಲಿಂಗಾಯತರನ್ನು ಒಡೆದು ಛಿದ್ರ ಮಾಡಿದ್ದೇ ಕಾಂಗ್ರೆಸ್‌: ಈಶ್ವರಪ್ಪ

10:58 PM Apr 26, 2023 | Team Udayavani |

ಬಾಗಲಕೋಟೆ: ಇಡೀ ದೇಶದಲ್ಲಿ ಜಾತಿ-ಜಾತಿಗಳನ್ನು ಒಡೆದಿದ್ದೇ ಕಾಂಗ್ರೆಸ್‌. ರಾಜ್ಯದಲ್ಲೂ ಲಿಂಗಾಯತ ಸಮಾಜವನ್ನು ಛಿದ್ರ ಮಾಡಿದೆ. ಆದರೆ ಬಿಜೆಪಿ ಜಾತಿ ರಾಜಕಾರಣ ಮಾಡುವುದಿಲ್ಲ. ಅದು ರಾಷ್ಟ್ರೀಯವಾದಿಯಾಗಿದೆ. ಲಿಂಗಾಯತ ಸಮಾಜವನ್ನು ಛಿದ್ರ ಮಾಡಿರುವ ಕಾಂಗ್ರೆಸ್‌ಗೆ ಜನರು ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸಂಪೂರ್ಣ ಜಾತಿವಾದಿ. ಬಿಜೆಪಿ ರಾಷ್ಟ್ರೀಯವಾದಿಯಾಗಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಹೊರಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸಿದ್ದಾರೆ. ಆದರೆ ಪ್ರಚಾರಕ್ಕೆ ಹೋದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ ಎನ್ನುತ್ತಾರೆ. ಇವರು ಅಧಿಕಾರಕ್ಕೆ ಬಂದರೆ ಪಿಎಫ್‌ಐ ನಿಷೇಧ, ಗೋಹತ್ಯೆ ನಿಷೇಧದಂತಹ ಕಾಯ್ದೆ ಮರಳಿ ಜಾರಿ ಮಾಡುತ್ತಾರೆ. ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಲ್ಲಿ ಸೋತರೂ ಬುದ್ಧಿ ಬಂದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next