Advertisement

Basavaraj Bommai ಸಂವಿಧಾನಕ್ಕೆ ಹೆಚ್ಚು ದ್ರೋಹ ಬಗೆದಿದ್ದು ಕಾಂಗ್ರೆಸ್‌

12:11 AM Jun 30, 2024 | Team Udayavani |

ಚಿಕ್ಕಬಳ್ಳಾಪುರ: ಕಳ್ಳನೇ ಪೊಲೀಸ್‌ಗೆ ಪಾಠ ಹೇಳಿದಂತೆ ಕಾಂಗ್ರೆಸ್‌ ಪಕ್ಷವು ಸಂವಿಧಾನದ ಬಗ್ಗೆ ಮಾತನಾಡುತ್ತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಲ್ಲದೆ ಅದಕ್ಕೆ ದ್ರೋಹ ಬಗೆದುಕೊಂಡು ಬಂದ ಆ ಪಕ್ಷವು ಇಂದು ಸಂವಿಧಾನದ ರಕ್ಷಣೆ ಬಗ್ಗೆ ಮಾತನಾಡುತ್ತಿರುವು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಚಿಕ್ಕಬಳ್ಳಾಪುರದ ನೂತನ ಸಂಸದ ಡಾ| ಕೆ. ಸುಧಾಕರ್‌ ಅವರ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, 75 ವರ್ಷಗಳಲ್ಲಿ ಸಂವಿಧಾನಕ್ಕೆ ಹೆಚ್ಚು ದ್ರೋಹ ಬಗೆದಿದ್ದು, ತಿರುಚಿದ್ದು, ತುರ್ತು ಪರಿಸ್ಥಿತಿ ಹೇರಿದ್ದು, ಜನರ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಿದ್ದು ಎಲ್ಲವೂ ಕಾಂಗ್ರೆಸ್‌. ಆದರೆ ಸಂಸತ್‌ನಲ್ಲಿ ಕಾಂಗ್ರೆಸ್‌ ಸಂವಿಧಾನ ಪುಸ್ತಕ ಹಿಡಿದದ್ದು ದೊಡ್ಡ ವಿಪರ್ಯಾಸ ಎಂದು ವಾಗ್ಧಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್‌ ಸಂಪೂರ್ಣ ದಿವಾಳಿ ಆಗಿದೆ. ಸರಕಾರದ ಖಜಾನೆ ಕೂಡ ಖಾಲಿ ಆಗಿದೆ. ನನ್ನ ಜೀವಮಾನದಲ್ಲಿ ನೋಡದ ಅತ್ಯಂತ ಕೆಟ್ಟ ಸರಕಾರ ರಾಜ್ಯದ ಕಾಂಗ್ರೆಸ್‌ ಸರಕಾರ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next