ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ನಾಲ್ವರು ಶಾಸಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೃದು ಧೋರಣೆ ತೋರಿಸಿದ್ದಾರೆ. ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಶಾಸಕರ ವಿರುದಟಛಿ ಕ್ರಮ ಕೈಗೊಳ್ಳುವ ಮನಸ್ಸು ನಮಗಿಲ್ಲ ಎಂದು ಹೇಳಿದರು.
ಶಾಸಕಾಂಗ ಪಕ್ಷದ ಸಭೆಗೆ ಗೈರು ಆಗಿರುವ ನಾಲ್ಕು ಶಾಸಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತೇವೆ. ಅವರಿಂದ ಸಮಂಜಸ ಉತ್ತರ ಸಹ ನಿರೀಕ್ಷಿಸುತ್ತೇವೆ. ರಮೇಶ್ ಜಾರಕಿಹೊಳಿ, ನಾನು ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದವರು. ಅವರು ವಾಪಸ್ ಬರುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರಿಗೂ ಒಂದು ಅವಕಾಶ ಕೊಟ್ಟುನೋಡುತ್ತೇವೆ. ಕ್ರಮಕ್ಕೆ ಮುಂದಾಗುವ ಹಂತಕ್ಕೆ ರಮೇಶ್ ಜಾರಕಿಹೊಳಿ ಸಂಬಂಧ ಕೆಡಿಸಿಕೊಳ್ಳಲಾರರು ಎಂಬ ನಂಬಿಕೆ ನನಗಿದೆ ಎಂದು ಹೇಳಿದರು. ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಬರುವ ಇಚ್ಛೆ ನಮಗೆ ಇರಲಿಲ್ಲ. ಆದರೆ, ಬಿಜೆಪಿ ಅಸ್ಥಿರತೆ ಮೂಡಿಸಲು ಪ್ರಯತ್ನ ಮಾಡಿದ್ದರಿಂದ
ಒಗ್ಗಟ್ಟು ಪ್ರದರ್ಶಿಸಲು ಬರಬೇಕಾಯಿತು ಎಂದರು.